Home ನಮ್ಮ ಜಿಲ್ಲೆ ಮಂಡ್ಯದಲ್ಲಿ ಸಚಿವರನ್ನು ಕೆರಳಿಸಿದ ಅಲಿಬಾಬಾ ಕಥೆ

ಮಂಡ್ಯದಲ್ಲಿ ಸಚಿವರನ್ನು ಕೆರಳಿಸಿದ ಅಲಿಬಾಬಾ ಕಥೆ

0

ಮಂಡ್ಯ: ಅಲಿಬಾಬಾ ಕಥೆ ಸಚಿವ ನಾರಾಯಣಗೌಡರ ಆಕ್ರೋಶಕ್ಕೆ ಕಾರಣವಾಯಿತು. ಸಚಿವರು ಕೆಂಡಾಮಂಡಲರಾಗುತ್ತಿದ್ದಂತೆ ವೇದಿಕೆಯಲ್ಲಿದ್ದ ಗಣ್ಯರು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹೌದು, ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಡಿಎಸ್​ ಪುರಸಭೆ ಸದಸ್ಯ ಬಸ್ ಸಂತೋಷ್, ಸಚಿವ ಕೆ.ಸಿ. ನಾರಾಯಣಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ವೇದಿಕೆ ಮೇಲೆ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಸ್ ಸಂತೋಷ್, ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎನ್ನುತ್ತಾ, ಅಲಿಬಾಬಾ ಕಥೆ ಹೇಳುವ ಮೂಲಕ ಪರೋಕ್ಷವಾಗಿ ನಾರಾಯಣಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಕಥೆ ಕೇಳುತ್ತಿದ್ದಂತೆ ಕೋಪಗೊಂಡ ಸಚಿವ ನಾರಾಯಣಗೌಡರು ವೇದಿಕೆ ಮೇಲೆ ಆಕ್ರೋಶ ಹೊರ ಹಾಕಿದರು.

ಸಚಿವರನ್ನು ಕೆರಳಿಸಿದ ಅಲಿಬಾಬಾ ಕಥೆ

Exit mobile version