Home News ಫೋಟೋ ತೆಗೆಸಿಕೊಳ್ಳಲು ಹೋಗಿ ನದಿಪಾಲಾದ ಯುವಕ

ಫೋಟೋ ತೆಗೆಸಿಕೊಳ್ಳಲು ಹೋಗಿ ನದಿಪಾಲಾದ ಯುವಕ

ಶ್ರೀರಂಗಪಟ್ಟಣ: ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಯುವಕನೋರ್ವ ಕೊಚ್ಚಿ ಹೋದ ಘಟನೆ ತಾಲೂಕಿನ ಬೆಳಗೋಳ ಬಳಿಯ ಸರ್ವಧರ್ಮ ಆಶ್ರಮದ ಬಳಿ ನಡೆದಿದೆ.
ಮೈಸೂರಿನಲ್ಲಿ ಆಟೋ ಚಾಲಕನಾಗಿ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ (36) ಕಾಲುಜಾರಿ ಬಿದ್ದು ಇಲ್ಲಿನ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಭಾನುವಾರ ಸಂಜೆ ಮಹೇಶ್ ತನ್ನ ಸ್ನೇಹಿತರೊಂದಿಗೆ ಕೆಆರ್‌ಎಸ್‌ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದು, ಸರ್ವಧರ್ಮ ಆಶ್ರಮದ ಬಳಿ ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ಹೋದಾಗ ಆಯತಪ್ಪಿ ಕಾವೇರಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಮಹೇಶ್‌ ಕೊಚ್ಚಿ ಹೋಗಿದ್ದು, ಕೊಚ್ಚಿ ಹೋದ ಮಹೇಶ್‌ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exit mobile version