Home ನಮ್ಮ ಜಿಲ್ಲೆ ಕೋಲಾರ ಪೊಲೀಸ್ ಠಾಣೆ ಎದುರು ಕೆಜಿಎಫ್ ಶಾಸಕಿ ಪ್ರತಿಭಟನೆ

ಪೊಲೀಸ್ ಠಾಣೆ ಎದುರು ಕೆಜಿಎಫ್ ಶಾಸಕಿ ಪ್ರತಿಭಟನೆ

0

ಕೋಲಾರ: ಅಧಿಕಾರಿಗಳು ರಾಜಕೀಯ ಪ್ರಭಾವ ಬಳಸಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಕೆಜಿಎಫ್ ಶಾಸಕಿ ರೂಪಕಲಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆ ಮತದಾರರಿಗೆ ಫುಡ್‌ಕಿಟ್ ಕೊಡಲು ಪ್ಲಾನ್ ಮಾಡಿದ್ದ ಶಾಸಕಿ ಬೇತಮಂಗಲ ಗ್ರಾಮದ ಬಳಿ ಸಂಗ್ರಹಿಸಿದ್ದ ಫುಡ್‌ಕಿಟ್ ವಶಪಡಿಸಿಕೊಳ್ಳಲು
ಕಳೆದ ರಾತ್ರಿ ಅಧಿಕಾರಿಗಳು ಮುಂದಾಗಿದ್ದರು. ಅಲ್ಲದೇ ಮಾರ್ಚ್ 9ರಂದು ಕೋಲಾರ ತಾಲ್ಲೂಕು ಬ್ಯಾಲಹಳ್ಳಿ ಗ್ರಾಮದಲ್ಲಿ ಕೂಡ ರೇಡ್ ಮಾಡಲಾಗಿತ್ತು. ಹೀಗಾಗಿ ಮೇಲಿಂದ ಮೇಲೆ ಶಾಸಕಿಗೆ ಸಂಬಂಧಿಸಿದ ಗೋಡೌನ್ ಮೇಲೆ ಅಧಿಕಾರಿಗಳ ದಾಳಿ ನಡೆಸುತ್ತಿದ್ದಾರೆಂದು ಶಾಸಕಿ ರೂಪಕಲಾ ನೂರಾರು ಬೆಂಬಲಿಗರೊಂದಿಗೆ ಬೇತಮಂಗಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದ ಶಾಸಕಿ, ಅಧಿಕಾರಿಗಳನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಬಡವರಿಗೆ ಕೊಡಲು ತಂದಿದ್ದ ಅಕ್ಕಿ, ಬೇಳೆ ಎಲ್ಲವನ್ನು ಹಿಡಿದಿದ್ದಾರೆ ಅದನ್ನ ಸಹಿಸಿಕೊಂಡೆ, ನನ್ನ ಕಾರ್ಯಕರ್ತರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶಗೊಂಡರು.

ಪೊಲೀಸ್ ಠಾಣೆ ಎದುರು ಕೆಜಿಎಫ್ ಶಾಸಕಿ ಪ್ರತಿಭಟನೆ

Exit mobile version