ಮಹಿಳಾ ವಕೀಲರೊಂದಿಗೆ ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ ಧಾರವಾಡ ವಕೀಲರ ಸಂಘದ ವತಿಯಿಂದ ಜುಬಿಲಿ ವೃತ್ತದಲ್ಲಿ ರಸ್ತೆ ತಡೆ ಡೆಯಿತು.
ಪೊಲೀಸ್ ಅಧಿಕಾರಿ ಸ್ಥಳಕ್ಕಾಗಮಿಸಬೇಕೆಂದು ಆಗ್ರಹಿಸಿದರು. ರಸ್ತಾರೋಕೊ ಸಂದರ್ಭದಲ್ಲಿ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಮಾತಿನ ಚಕಮಕಿ ನಡೆಯಿತು. ಮಾನವ ಸರಪಳಿ ದಾಟಿ ಹೋಗಲೆತ್ನಿಸಿದ ಯುವಕನನ್ನು ವಕೀಲರು ಥಳಿಸಿದ ಘಟನೆ ನಡೆಯಿತು. ವಕೀಲರು ಜುಬಿಲಿ ವೃತ್ತದಲ್ಲಿ ಟಾಯರ್ ಸುಟ್ಟು ಪ್ರತಿಭಟಿಸಿದರು.
