Home News ದಾಖಲೆ ಕೊಡಿ, ಜೈಲಿಗೆ ಹಾಕ್ತೀನಿ

ದಾಖಲೆ ಕೊಡಿ, ಜೈಲಿಗೆ ಹಾಕ್ತೀನಿ

ಚಿಕ್ಕಮಗಳೂರು: ಯಾರ್ಯಾರು ರೈತರಿಗೆ ಮೋಸ ಮಾಡಿದ್ದಾರೆ ಅದರ ಸೂಕ್ತ ದಾಖಲೆ ಕೊಟ್ರೆ ಅಧಿಕಾರಿಗಳನ್ನ ಜೈಲಿಗೆ ಹಾಕುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು, 57ರ ಅರ್ಜಿಯಲ್ಲಿ ರೈತರಿಗೆ ಮೋಸ ಮಾಡಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿ ಮೋಸ ಮಾಡಿದವರನ್ನೆಲ್ಲ ಜೈಲಿಗೆ ಅಟ್ಟಲಾಗುತ್ತದೆ ಎಂದಿದ್ದಾರೆ.
ಗ್ರಾಮ ವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವುದು‌. ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವಿಗೆ ಸ್ಪಂದಿಸುತ್ತೇನೆ. ನಾನು ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ರಾಜಕೀಯ ಮಾತನಾಡಲ್ಲ. ನಾಳೆ ಬೆಳಗ್ಗೆ ೧೦ ಗಂಟೆಗೆ ಬನ್ನಿ, ಎಲ್ಲ ರಾಜಕೀಯ ಬಗ್ಗೆ ಮಾತನಾಡುತ್ತೇನೆ ಎಂದರು.

Exit mobile version