Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ದಂಪತಿ ಆತ್ಮಹತ್ಯೆ

ದಂಪತಿ ಆತ್ಮಹತ್ಯೆ

0

ಮಂಗಳೂರು: ನಗರದ ಫಳ್ನೀರ್‌ನ ವಸತಿ ಗೃಹದಲ್ಲಿ ಕೇರಳದ ಕಣ್ಣೂರಿನ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೇರಳ ಕಣ್ಣೂರಿನ ರವೀಂದ್ರ (೫೫) ಮತ್ತು ಸುಧಾ (೫೦) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಮೋತಿಮಹಲ್ ಪಕ್ಕದ ಬ್ಲೂಸ್ಟಾರ್ ಲಾಡ್ಜ್‌ನಲ್ಲಿ ಫೆ.೬ ರಂದು ಮಧ್ಯಾಹ್ನ ದಂಪತಿ ರೂಮ್ ಪಡೆದಿದ್ದರು. ಬುಧವಾರ ದಂಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಬಟ್ಟೆ ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version