Home ನಮ್ಮ ಜಿಲ್ಲೆ ಧಾರವಾಡ ಡಿ.ಕೆ ಶಿವಕುಮಾರ ಸ್ವಾಗತಕ್ಕೆ ಸಚಿವ, ಶಾಸಕರು ಗೈರು

ಡಿ.ಕೆ ಶಿವಕುಮಾರ ಸ್ವಾಗತಕ್ಕೆ ಸಚಿವ, ಶಾಸಕರು ಗೈರು

0

ಹುಬ್ಬಳ್ಳಿ : ಕೆಲ ದಿನಗಳ ಹಿಂದೆ ಬೆಳಗಾವಿಗೆ ಕೆ.ಪಿ.ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಭೇಟಿ ನೀಡಿದಾಗ ಅಲ್ಲಿ ಶಾಸಕರು ಸಚಿವರು ಸ್ವಾಗತಕ್ಕೆ ಬಂದಿರಲಿಲ್ಲ. ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಡಿ.ಕೆ.ಶಿವಕುಮಾರ ಅವರನ್ನು ಸ್ವಾಗತಿಸಲು ಬಂದಿದ್ದು ಒಬ್ಬ ಶಾಸಕರು ಮಾತ್ರ!
ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಸ್ವಾಗತಕ್ಕೆ ಬಂದಿದ್ದು ಮಾತ್ರ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್ ಕೋನರಡ್ಡಿಯವರು ಮಾತ್ರ. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ ಅನುಪಸ್ಥಿತಿ ಎದ್ದು ಕಂಡರೆ, ಸಚಿವ ಸಂತೋಷ ಲಾಡ್ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿತ್ರದುರ್ಗ ಪ್ರವಾಸದಲ್ಲಿದ್ದರೆನ್ನಲಾಗಿದೆ. ಇನ್ನು ವಿನಯ್ ಕುಲಕರ್ಣಿ ಅವರಿಗೆ ಜಿಲ್ಲೆ ಪ್ರವೇಶ ನಿರ್ಬಂಧಿಸಿ ನ್ಯಾಯಾಲಯ ಆದೇಶ ಇದ್ದುದರಿಂದ ಅವರು ಬಂದಿರಲಿಲ್ಲ. ಕಾಂಗ್ರೆಸ್ ಬಣ ರಾಜಕೀಯ ತಾರಕ್ಕೇರಿರುವುದು, ಅಧಿಕಾರ ಹಂಚಿಕೆ ಶೀತಲ ಸಮರ ನಡೆದಿರುವ ನಡುವೆ ಕೆಪಿಸಿಸಿ ಅಧ್ತಕ್ಷರ ಸ್ವಾಗತಕ್ಕೆ ಹಿರಿಯ ಶಾಸಕರು, ಹಿರಿಯ ಮುಖಡರು ಗೈರಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Exit mobile version