Home ನಮ್ಮ ಜಿಲ್ಲೆ ಡಿಕೆಶಿ ಭಾವ ಆಪ್‌ ಸೇರ್ಪಡೆ

ಡಿಕೆಶಿ ಭಾವ ಆಪ್‌ ಸೇರ್ಪಡೆ

0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರಿಯ ಪತಿ ಹಾಗೂ ಕೆಪಿಸಿಸಿ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಸಿ.ಪಿ ಶರತ್ ಚಂದ್ರ ಆಮ್ ಆದ್ಮಿ ಪಕ್ಷಕ್ಕೆ ಇಂದು ಸೇರ್ಪಡೆಯಾಗಿದ್ದಾರೆ.
ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಸಿ.ಪಿ. ಶರತ್‌ಚಂದ್ರ ಅವರು, ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ. ಹಾಗಂತ ನಾನು ಟಿಕೆಟ್‌ಗಾಗಿ ಬೇಡಿಕೊಂಡು ಹೋಗಲ್ಲ. ಡಿಕೆಶಿ ಸಂಬಂಧಿಯಾಗಿರಬಹುದು‌. ಹಾಗಂತ ಟಿಕೆಟ್‌ಗಾಗಿ ಭಿಕ್ಷೆ ಬೇಡ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಶೈಲಿಯಿಂದ ಬೇಸತ್ತು ಎಎಪಿಗೆ ಸೇರ್ಪಡೆಗೊಂಡಿದ್ದೇನೆ ಎಂದ ಅವರು, ಇನ್ನೂ ಡಿಕೆಶಿ ಜೊತೆ ನಾನು ಪಕ್ಷ ಬಿಡುವ ಬಗ್ಗೆ ಸಮಾಲೋಚನೆ ಮಾಡಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ. ನಾನು ಚನ್ನಪಟ್ಟಣದಲ್ಲಿ ಅಪಾರ ಸೇವೆ ಮಾಡಿದ್ದೇನೆ. ಹೀಗಾಗಿ ಎಎಪಿಯಿಂದಲೂ ಅಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದೇನೆ‌ ಎಂದು ಹೇಳಿದರು.

Exit mobile version