Home ನಮ್ಮ ಜಿಲ್ಲೆ ಧಾರವಾಡ ಕೈಗಾರಿಕೆ 4.0ಗೆ ಕರ್ನಾಟಕದ ಕೊಡುಗೆ ಅಪಾರ: ಅಶ್ವತ್ಥನಾರಾಯಣ

ಕೈಗಾರಿಕೆ 4.0ಗೆ ಕರ್ನಾಟಕದ ಕೊಡುಗೆ ಅಪಾರ: ಅಶ್ವತ್ಥನಾರಾಯಣ

0

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಸಹಾಯವಾಣಿ 155267 ಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಹುಬ್ಬಳ್ಳಿಯಲ್ಲಿ ಚಾಲನೆ‌ ನೀಡಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದ ನೂತನ ಬಹುಕೌಶಲ್ಯಾಭಿವೃದ್ಧಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಬರಲಿವೆ. ಆದರೆ ನಮ್ಮಲ್ಲಿ ಕೌಶಲ್ಯ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಲಿ ಕಲಿಕೆಯ ಜೊತೆಗೆ ಸ್ಕಿಲ್‌ಗೆ ಹೆಚ್ವು ಒತ್ತು ನೀಡಬೇಕು ಎಂದರು.


60+ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳು ಇಲ್ಲಿ ಲಭ್ಯವಿರಲಿದೆ. ಕೈಗಾರಿಕೆ 4.0ಗೆ ಕರ್ನಾಟಕದ ಕೊಡುಗೆ ಅಪಾರವಾಗಿರಬೇಕು ಹಾಗೂ ನಮ್ಮ ರಾಜ್ಯದ ಯುವಜನತೆಗೆ ಇದರ ಲಾಭ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು ಎಂಬ ಉದ್ದೇಶದೊಂದಿದೆ ಕೌಶಲ್ಯ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು, ಅಧಿಕಾರಿಗಳು ಹಾಗೂ ಇತ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version