ಸುಬ್ರಹ್ಮಣ್ಯ: ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ಮಂಗಳವಾರ ಸಂಜೆಯ ಹೊತ್ತಿಗೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ವರುಣನ ಆರ್ಭಟದೊಂದಿಗೆ ಧಾರಾಕಾರವಾಗಿ ಮಳೆ ಸುರಿದಿದೆ.
ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ವಾಹನಗಳು ಓಡಾಡಲು ಪರದಾಡುತ್ತಿದ್ದವು. ಮಲೀನಗೊಂಡಿದ್ದ ದರ್ಪಣ ತೀರ್ಥ ಒಮ್ಮೆಗೆ ನಿರಾಳವಾಗಿದೆ. ಈ ಬಾರಿ ಕುಕ್ಕೆಯಲ್ಲಿ ಇಷ್ಟು ಹೊತ್ತು ಮಳೆ ಧಾರಾಕಾರವಾಗಿ ಬಂದಿರೋದು ಇದೆ ಮೊದಲ ಬಾರಿಯಾಗಿದೆ.
ಸುಬ್ರಹ್ಮಣ್ಯದ ಕನ್ನಡಿ ಹೊಳೆ ಸೇತುವೆ ಮೇಲೆ ಪೂರ್ತಿ ನೀರು ನಿತ್ತು ಸೇತುವೆ ಇಕ್ಕಲಗಳಲ್ಲಿ ನೀರು ಹೋಗಲಾಗದೆ ವಾಹನಗಳಿಗೆ ಸಂಚರಿಸಲು ಕಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆದು ಯಾವುದೇ ದೊಡ್ಡ ಹಾನಿಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.