Home ನಮ್ಮ ಜಿಲ್ಲೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದಿದ್ದಕ್ಕೆ ಕಪಾಳಮೋಕ್ಷ

ಏನು ಅಭಿವೃದ್ಧಿ ಮಾಡಿದ್ದೀರಿ ಎಂದಿದ್ದಕ್ಕೆ ಕಪಾಳಮೋಕ್ಷ

0

ಚುನಾವಣೆ ಮುಗಿದು ಐದು ವರ್ಷದ ಮೇಲೆ ನಮ್ಮ ಗ್ರಾಮಕ್ಕೆ ಬಂದಿದ್ದೀರಿ, ಏನು ಅಭಿವೃದ್ಧಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದ ಯುವಕನಿಗೆ ಮಾಜಿ ಸಚಿವವರೂ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ಕಪಾಳಮೋಕ್ಷ ಮಾಡಿದ್ದಾರೆ.
ಹೀಗೆ ಕಪಾಳಮೋಕ್ಷ ಮಾಡಿದ್ದ ರಾಜಕಾರಣಿ ಬೇರಾರು ಅಲ್ಲ, ಮಾಜಿ ಸಚಿವ ಮತ್ತು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್. ವಿಜಯಪುರ ಜಿಲ್ಲೆ ಬಬಲೇಶ್ವರದ ದೇವಾಪೂರ ಗ್ರಾಮಕ್ಕೆ ಮತಯಾಚನೆಗೆ ಬಂದಿದ್ದ ಸಂದರ್ಭದಲ್ಲಿ ಅವರನ್ನು ಯುವಕ ಪ್ರಶ್ನೆ ಮಾಡಿದ್ದ. ಇದರಿಂದ ಕೋಪಗೊಂಡ ಎಂ.ಬಿ. ಪಾಟೀಲ್‌ ತುಂಬಿದ ಸಭೆಯಲ್ಲಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಎಂ.ಬಿ. ಪಾಟೀಲ್ ಅವರ ಈ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನು ಅಭಿವೃದ್ಧಿ ಮಾಡಿದ್ದೀರಿ? ಎಂದಿದ್ದಕ್ಕೆ ಕಪಾಳಮೋಕ್ಷ

Exit mobile version