Home ನಮ್ಮ ಜಿಲ್ಲೆ ಚಿತ್ರದುರ್ಗ ಅವನೇನು ಪೂಜಿಸಲು ಕುಕ್ಕರ್‌ ಒಯ್ಯುತ್ತಿದ್ದನೆ..?

ಅವನೇನು ಪೂಜಿಸಲು ಕುಕ್ಕರ್‌ ಒಯ್ಯುತ್ತಿದ್ದನೆ..?

0

ಚಿತ್ರದುರ್ಗ: ಕಾಂಗ್ರೆಸ್‌ ಭ್ರಷ್ಟಾಚಾರದ ತವರು ಮನೆ. ಕಾಂಗ್ರೆಸ್‌ ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದೆ. ಅಷ್ಟೇ ಅಲ್ಲ ದೇಶ ಒತ್ತೆಯಿಡಲೂ ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಡಿ.ಕೆ. ಶಿವಕುಮಾರ್‌ಗೆ ಟಾಂಗ್‌ ನೀಡಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಪೂಜಿಸಲು ಕುಕ್ಕರ್‌ ತೆಗೆದುಕೊಂಡು ಹೋಗುತ್ತಿದ್ದನೆ? ಸ್ಫೋಟಕ ವಸ್ತುಗಳನ್ನು ಪೂಜಿಸಲು ಒಯ್ಯುತ್ತಾರಾ? ಆಕಸ್ಮಿಕವಾಗಿ ಆಟೋದಲ್ಲಿ ಸ್ಫೋಟವಾಗಿ ದುರಂತ ತಪ್ಪಿದೆ. ಜನನಿಬಿಡ ಪ್ರದೇಶದಲ್ಲಿ ಸ್ಫೋಟ ಆಗಿದ್ದರೆ ಅದೆಷ್ಟು ಜನರ ಸಾವಾಗುತ್ತಿತ್ತು. ಅಂಥವರ ರಕ್ಷಣೆ ಮಾಡುವ ಮಾತು ನಾಚಿಕೆಗೇಡು ಎಂದು ಕಿಡಿಕಾರಿದರು.
ವಿಶ್ವನಾಥ ಆರೋಪದಲ್ಲಿ ಹುರುಳಿಲ್ಲ:
ಎಂಎಲ್‌ಸಿ ಹೆಚ್.ವಿಶ್ವನಾಥ್ ಯಾವಾಗ ಏನು ಹೇಳುತ್ತಾರೋ ಅವರಿಗೇ ಗೊತ್ತಿರಲ್ಲ. ಆಗ ಕೆಟ್ಟ ಸಮ್ಮಿಶ್ರ ಸರ್ಕಾರ ತೆಗೆಯಲು ಬಂದಿದ್ದೇವೆ ಎಂದಿದ್ದರು. ಈಗ ದುಡ್ಡಿನ ಆಮಿಷ ಒಡ್ಡಿದ್ದರು ಎಂಬ ಆರೋಪ ಸರಿಯಲ್ಲ.
ಬಹಳಷ್ಟು ಜನರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಸದ್ಯದಲ್ಲೇ ಪಟ್ಟಿ ಹೊರಬೀಳಲಿದೆ. ಕಾದು ನೋಡಿ ಎಂದು ಬಿ.ಸಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದರು.

Exit mobile version