Home ಅಪರಾಧ ಶಾಲಾ ಬಾಲಕನ ಕೊಲೆ ಪ್ರಕರಣ: ಇಬ್ಬರ ಬಂಧನ

ಶಾಲಾ ಬಾಲಕನ ಕೊಲೆ ಪ್ರಕರಣ: ಇಬ್ಬರ ಬಂಧನ

0

ಬೆಳಗಾವಿ: ನಿಪ್ಪಾಣಿ ತಾಲ್ಲೂಕಿನ ಸಂಭಾಜಿ ನಗರದಲ್ಲಿ ಶಾಲಾ ಬಾಲಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜುಬೇರ ಸಲೀಂ ಯಕಂಬೆ (೨೧) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೆ ಬಂಧನಕ್ಕೆ ಒಳಗಾದವರಾಗಿದ್ದು, ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಬಾಲ ಮಂದಿರಕ್ಕೆ ಒಪ್ಪಿಸಲಾಗಿದೆ.
ಅ. ೧೯ರಂದು ಮನೆಯಿಂದ ಹೊರಗಡೆ ಹೋಗಿದ್ದ ಶಾಕೀಬ ಸಮೀರ ಪಠಾಣ ನಾಪತ್ತೆಯಾಗಿದ್ದು, ೨೦ರಂದು ಆತನ ಶವ ಪತ್ತೆಯಾಗಿತ್ತು. ಒಂದೇ ದಿನದಲ್ಲಿ ಪೊಲೀಸರು ಪ್ರಕರಣ ಬೇಧಿಸಿರುವುದಾಗಿ ಎಸ್ಪಿ ಭೀಮಾಶಂಕರ ಗುಳೇದ ಹೇಳಿದರು.

Exit mobile version