Home ಅಪರಾಧ ಲಾರಿಗೆ ಬಸ್ ಡಿಕ್ಕಿ: ೧೧ಕ್ಕೂ ಹೆಚ್ಚು ಜನರಿಗೆ ಗಾಯ

ಲಾರಿಗೆ ಬಸ್ ಡಿಕ್ಕಿ: ೧೧ಕ್ಕೂ ಹೆಚ್ಚು ಜನರಿಗೆ ಗಾಯ

0
ಅಪಘಾತ

ಕುಷ್ಟಗಿ: ತಾಲೂಕಿನ ಕಲ್ಲಕೇರಿ ಕೋಳಿ ಫಾರ್ಮ್ ಹತ್ತಿರ ಕುಷ್ಟಗಿ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ೧೧ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಹರಿಹರದಿಂದ ಹೊಸಪೇಟೆ, ಕುಷ್ಟಗಿ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಹರಪನಹಳ್ಳಿ ಘಟಕದ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Exit mobile version