Home ಅಪರಾಧ ಮನೆಯಲ್ಲಿ ಸುರಂಗ ಕೊರೆದಿದ್ದವನ ಬಂಧನ

ಮನೆಯಲ್ಲಿ ಸುರಂಗ ಕೊರೆದಿದ್ದವನ ಬಂಧನ

0

ಮಂಡ್ಯ(ಬೆಳಕವಾಡಿ): ಪಾಳು ಮನೆಯೊಂದರಲ್ಲಿ ಅಕ್ರಮವಾಗಿ ಮಾರಾಕಾಸ್ತ್ರಗಳನ್ನು‌ ಸಂಗ್ರಹಿಸಿದ್ದಲ್ಲದೆ ಮನೆಯಲ್ಲಿ ‌ಆಳವಾದ ಸುರಂಗ ಕೊರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಭಕಾರ್ ಬಿನ್ ಅಬೂಬಕರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಕಳೆದ ‌೨೦೨೨ನೇ ಸೆಪ್ಟೆಂಬರ್ ೨ರಂದು ಪಟ್ಟಣದ ಕೋಟೆ ಬೀದಿ ವಾಸಿ ಪವಿತ್ರರಾಜು ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿತ್ತು. ಪವಿತ್ರರಾಜು ಅವರ ಒಂದು ಮನೆಯನ್ನು ಬಾಡಿಗೆ ಪಡೆದಿದ್ದ ತಸ್ಲಿಮ ಹಾಗೂ ಅವರ ಮಕ್ಕಳು ಮತ್ತು ಸಂಬಂಧಿಕರು ಹಿಂಭಾಗದ ಪಾಳು‌ ಮನೆಯಲ್ಲಿ ಅಕ್ರಮವಾಗಿ ಸೇರಿಕೊಂಡು ಮನೆಯಲ್ಲಿ ಲಾಂಗ್ ಮಚ್ಚುಗಳನ್ನು ಸಂಗ್ರಹಿಸಿದ್ದಲ್ಲದೆ ಮನೆಯಲ್ಲಿ ಭಾರಿ ಆಳವಾದ ಸುರಂಗವನ್ನು ಕೊರೆದಿದ್ದರು ಇದು ಭಾರಿ ಚೆರ್ಚೆಗೆ ಗ್ರಾಸವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣದ ಪೊಲೀಸರು ಐವರನ್ನು ಬಂಧಿಸಿದ್ದರು. ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಭಕಾಷ್ ನನ್ನ ನಿನ್ನೆ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Exit mobile version