Home ಅಪರಾಧ ಮಂಗ್ಲಿ ಕಾರಿನ ಗ್ಲಾಸ್ ಒಡೆದು ಹಾಕಿದ ಪುಂಡರು

ಮಂಗ್ಲಿ ಕಾರಿನ ಗ್ಲಾಸ್ ಒಡೆದು ಹಾಕಿದ ಪುಂಡರು

0
mangali

ಬಳ್ಳಾರಿ : ನಿನ್ನೆ ರಾತ್ರಿ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಹಾಡಲೆಂದು ಸಿಂಗರ್ ಮಂಗ್ಲಿ ಬಂದಿದ್ದರು. ಉತ್ಸವದಲ್ಲಿ ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.
ವಿಶೇಷವಾಗಿ ಯುವಕರ ದಂಡು ಮಂಗ್ಲಿ ಅವರನ್ನು ಕಾಣಲು ಮುಗಿಬಿದ್ದಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಗೂ ಯುವಕರು ನುಗ್ಗಿ ಬಂದಿದ್ದರು. ಈ ರೀತಿ ಯುವಕರು ನುಗ್ಗಿ ಬಂದ ಕೂಡಲೇ ಅಲ್ಲಿ ಗದ್ದಲವುಂಟಾಯಿತು. ಆಗ ಪೊಲೀಸರು ಧಾವಿಸಿ ಯುವಕರಿಗೆ ಲಘು ಲಾಟಿ ಪ್ರಹಾರ ಮಾಡಿದ್ದಾರೆ.
ಕೊನೆಗೆ ಮಂಗ್ಲಿಯವರು ತಮ್ಮ ಕಾರಿಗೆ ಹತ್ತಿ ಅಲ್ಲಿಂದ ಹೊರಟು ಹೋಗುವಾಗ ಪುಂಡರು ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಾರಿನ ಗ್ಲಾಸುಗಳು ಪುಡಿಯಾಗಿವೆ.

Exit mobile version