ಬೆಂಗಳೂರು : ಪೊಲೀಸ್ ಸೋಗಿನಲ್ಲಿ ಎಂಟ್ರಿ ಕೊಟ್ಟು ಚಿನ್ನದ ವ್ಯಾಪಾರಿ ಬಳಿ 6 ಲಕ್ಷ ಕ್ಯಾಶ್, ಚಿನ್ನದ ಬಿಸ್ಕತ್ ದರೋಡೆ ಮಾಡಿ ಶಾಕ್ ನೀಡಿದ್ದಾರೆ. ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಅರುಣ್ ಹಾಗೂ ಮಂಜು ಬಂಧಿತ ಆರೋಪಿಗಳು.
ಫೆಬ್ರವರಿ 7ರಂದು ಸುರೇಂದ್ರ ಎಂಬುವರಿಗೆ ಮೂವರಿದ್ದ ಗ್ಯಾಂಗ್ ಮೋಸ ಮಾಡಿದ್ದು, ಸುರೇಂದ್ರ ತಮಿಳುನಾಡಿನ ಚಿನ್ನ ವ್ಯಾಪಾರಿ ಉಪೇಂದ್ರನಾಥ್ ಬಳಿ ಕೆಲಸಕ್ಕಿದ್ದರು. ಮಾಲೀಕ ಹೇಳಿದಂತೆ ಆಭರಣ, ನಗದು ತೆಗೆದುಕೊಂಡು ಶಿವಮೊಗ್ಗಕ್ಕೆ ತೆರಳಿದ್ದರು. ನಗದು, ಚಿನ್ನದ ಬಿಸ್ಕತ್ ಸಮೇತ ವಾಪಸ್ ಬೆಂಗಳೂರಿಗೆ ಬರ್ತಿದ್ದರು. ಬೆಳಗಿನ ಜಾವ ತಮಿಳುನಾಡಿಗೆ ಹೋಗಲು ಸ್ಯಾಟಲೈಟ್ ನಿಲ್ದಾಣಕ್ಕೆ ಹೋಗಿದ್ರು, ಈ ವೇಳೆ ಬಸ್ಗೆ ನಾವು ಪೊಲೀಸರು ಅಂತಾ ಎಂಟ್ರಿ ಕೊಟ್ಟಿದ್ದರು. ಒಬ್ಬ ಖಾಕಿ ಡ್ರಸ್, ಇಬ್ಬರು ಸಿವಿಲ್ ಡ್ರೆಸ್ನಲ್ಲಿ ಬಂದಿದ್ದರು. ಬ್ಯಾಗ್ ಪರಿಶೀಲನೆ ಮಾಡಬೇಕು ಎಂದು ಬಸ್ನಿಂದ ಕೆಳಗಿಳಿಸಿದ್ದರು.
ವೈಟ್ ಕಾರ್ನಲ್ಲಿ ಕರೆದೊಯ್ದು ಚಿನ್ನದ ಬಿಸ್ಕತ್, 6 ಲಕ್ಷ ನಗದು ದೋಚಿದ್ರು, ಚಿನ್ನದ ವ್ಯಾಪಾರಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು, ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೋಮ್ ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರ ಬಂಧನವಾಗಿದೆ. ಬ್ಯಾಟರಾಯನಪುರ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.