Home ಅಪರಾಧ ಪತ್ನಿ ಹತ್ಯೆಗ್ಯೆದಿದ್ದ ಪತಿ ಅಂದರ್..

ಪತ್ನಿ ಹತ್ಯೆಗ್ಯೆದಿದ್ದ ಪತಿ ಅಂದರ್..

0

ಕಲಾದಗಿ: ಕಳೆದ ದಿ,೭ ರಂದು ಸಮೀಪದ ಹಿರೇಸಂಶಿಯ ತೊಟದ ಮನೆಯಲ್ಲಿ ಬೆಳಗಿನ ಜಾವ ಮಲಗಿದ್ದ ಪತ್ನಿಯನ್ನು ಕೊಡಲಿಯಿಂದ ಹತ್ಯೆಗ್ಯೆದು ಪರಾರಿಯಾಗಿದ್ದ ಆರೋಪ ಪತಿ ಶಿವಪ್ಪ ಉದ್ದನ್ನವರ ನನ್ನು ಬಂಧಿಸುವಲ್ಲಿ ಕಲಾದಗಿ ಪೋಲಿಸರು ಯಶಸ್ವಿಯಾಗಿದ್ದಾರೆ. ಪತ್ನಿಯನ್ನು ಅಮಾನುಷವಾಗಿ ಕೊಂದು ತಲೆಮರೆಸಿಕೊಂಡು ಓಡಾಡುತ್ತಿದ್ದ ಶಿವಪ್ಪ ಮಂಗಳವಾರ ರಾತ್ರಿ ಕೊರ್ತಿ-ಕೊಲ್ಹಾರದ ದಾಬಾವೊಂದರಲ್ಲಿ ಸೆರೆಸಿಕ್ಕಿದ್ದಾನೆ.
ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದ ಐದು ದಿನಗಳಿಂದ ತೀವ್ರ ಕಾರ್ಯಾಚರಣೆಯಲ್ಲಿದ್ದ ಸ್ಥಳಿಯ ಠಾಣಾಧಿಕಾರಿ ಪ್ರಕಾಶ ಬಣಕಾರ ಮತ್ತವರ ತಂಡದ ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಇಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಾಗು ಸಾರ್ವಜನಿಕರಿಂದ ಪ್ರಶಂಶೆಗಳು ಕೇಳಿ ಬಂದಿವೆ.

Exit mobile version