ಕೊಪ್ಪಳ: ಕನಕಗಿರಿ ಪಟ್ಟಣದಲ್ಲಿ ಊಟ ಮಾಡುವಾಗ ಅನ್ನದ ತುತ್ತು ಗಂಟಲಲ್ಲಿ ಸಿಲುಕಿದ ಪರಿಣಾಮ 14 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಮೃತ ಬಾಲಕನನ್ನು 14 ವರ್ಷದ ಆಂಜನೇಯ ಎಂದು ಗುರುತಿಸಲಾಗಿದೆ. ಕೊಪ್ಪಳದಲ್ಲಿ ಗಂಟಲಿನಲ್ಲಿ ಆಹಾರ ಸಿಲುಕಿದ ಪರಿಣಾಮ ಉಸಿರುಗಟ್ಟಿ ವಿಕಲಚೇತನ ಸಾವಿಗೀಡಾಗಿದ್ದಾನೆ. ಈ ಪ್ರಕರಣ ಕನಕಗಿರಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.