Home ಅಪರಾಧ ಕಾಲುವೆಗೆ ಬಿದ್ದ ಆಟೋ: ಮೂವರು ಸಾವು, ಮೂವರು ನಾಪತ್ತೆ

ಕಾಲುವೆಗೆ ಬಿದ್ದ ಆಟೋ: ಮೂವರು ಸಾವು, ಮೂವರು ನಾಪತ್ತೆ

0


ಬಳ್ಳಾರಿ:ತಾಲ್ಲೂಕಿನ ಕೊಳಗಲ್ಲು ಗ್ರಾಮದ ಹೊರ ವಲಯದ ಕಾಲುವೆಗೆ ಆಟೋ ಬಿದ್ದ ಪರಿಣಾಮ 3 ಜನ ಕೂಲಿ ಕಾರ್ಮಿಕರು ದುರ್ಮರಣಕ್ಕೆ ಈಡಾಗಿದ್ದು, ಇನ್ನೂ ಮೂವರು ನಾಪತ್ತೆ ಆದ ಘಟನೆ ಸಂಭವಿಸಿದೆ.
ಗ್ರಾಮದ ನಿಂಗಮ್ಮ, ದುರುಗಮ್ಮ, ಪುಷ್ಪಾವತಿ ಘಟನೆಯಲ್ಲಿ ಮರಣಕ್ಕೆ ಈಡಾಗಿದ್ದಾರೆ.
ಕಡಿತಿನಿ ಹುಲಿಗೆಮ್ಮ, ಲಕ್ಷ್ಮಿ, ನಾಗರತ್ನ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಆಟೋದಲ್ಲಿ ಇದ್ದ ಈಡಿಗರ ಭೀಮ, ದಮ್ಮೂರು ಎರಮ್ಮ, ಹೇಮಾವತಿ, ಶಿಲ್ಪ, ಮಹೇಶ್ ಘಟನೆಯಲ್ಲಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.

Exit mobile version