Home ಕೃಷಿ/ವಾಣಿಜ್ಯ ಜಿಎಸ್‌ಟಿ ಪರಿಷ್ಕರಣೆ: ಹುಂಡೈ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, ಪಟ್ಟಿ

ಜಿಎಸ್‌ಟಿ ಪರಿಷ್ಕರಣೆ: ಹುಂಡೈ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, ಪಟ್ಟಿ

0

ಜಿಎಸ್‌ಟಿ ಪರಿಷ್ಕರಣೆ ಸೆಪ್ಟೆಂಬರ್ 22ರಿಂದ ಜಾರಿಯಾಗಲಿದೆ. ಈ ಹಿನ್ನಲೆಯಲ್ಲಿ ಕಾರುಗಳ ಬೆಲೆಯಲ್ಲಿಯೂ ಪರಿಷ್ಕರಣೆಯಾಗಲಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ವಾಹನಗಳ ಬೆಲೆಯಲ್ಲಿ 2.4 ಲಕ್ಷ ರೂಪಾಯಿಗಳವರೆಗೆ ಕಡಿತವನ್ನು ಘೋಷಣೆ ಮಾಡಿದೆ.

ಜಿಎಸ್‌ಟಿ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ. ಹುಂಡೈ ಕಾರುಗಳ ಬೆಲೆಯಲ್ಲಿ ಆಗುವ ಕಡಿತದ ಬಳಿಕ ಇನ್ನಷ್ಟು ಜನರು ಕಂಪನಿಯ ಕಾರು ಖರೀದಿ ಮಾಡುವ ನಿರೀಕ್ಷೆ ಇದೆ. ಕಂಪನಿಯ ಪ್ರೀಮಿಯಂ ಎಸ್‌ಯುವಿ ಟಕ್ಸನ್‌ನ ದರದಲ್ಲಿ ₹2.4 ಲಕ್ಷದಷ್ಟು ಇಳಿಕೆಯಾಗಲಿದೆ ಎಂದು ಹೇಳಿದೆ.

ಇದು ಹಬ್ಬದ ಸೀಸನ್ ಆರಂಭವಾಗುತ್ತಿರುವ ಸಂದರ್ಭದಲ್ಲಿ ವಾಹನ ಖರೀದಿದಾರರಿಗೆ ಸಿಹಿ ಸುದ್ದಿಯಾಗಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅನ್ಸೂ ಕಿಮ್, “ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಭಾರತ ಸರ್ಕಾರದ ದೂರದೃಷ್ಟಿಯ ಕ್ರಮವನ್ನು ನಾವು ಶ್ಲಾಘಿಸುತ್ತೇವೆ” ಎಂದು ಹೇಳಿದ್ದಾರೆ.

ಯಾವ ಕಾರು ಬೆಲೆ ಎಷ್ಟು ಕಡಿಮೆ? ಈ ಬೆಲೆ ಸೆಪ್ಟೆಂಬರ್ 22, 2025ರಿಂದ ಜಾರಿಗೆ

  • ನಿಯೋಸ್: ₹73,808
  • ಔರಾ: ₹78,465
  • ಎಕ್ಸ್ಟರ್: ₹89,209
  • ಐ20: ₹98,053
  • ಐ20 ಎನ್‌-ಲೈನ್: ₹108,116
  • ವೆನ್ಯೂ: ₹123,659
  • ವೆನ್ಯೂ ಎನ್-ಲೈನ್: ₹119,390
  • ವರ್ನಾ: ₹60,640
  • ಕ್ರೆಟಾ: ₹72,145
  • ಕ್ರೆಟಾ ಎನ್-ಲೈನ್: ₹71,762
  • ಅಲ್ಕಾಜರ್: ₹75,376
  • ಟಕ್ಸನ್: ₹2,40,303

NO COMMENTS

LEAVE A REPLY

Please enter your comment!
Please enter your name here

Exit mobile version