ಬೆಂಗಳೂರು: ಸ್ಯಾಮ್‌ಸಂಗ್ ಕಂಪನಿಯು ಇತ್ತಿಚೆಗೆ ಭಾರತದಲ್ಲಿ ತನ್ನ ಹೊಸ ಮಧ್ಯಮ-ವರ್ಗದ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ17 5ಜಿ (Galaxy M17 5G) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಮಾರಾಟ ಆರಂಭಿಸಿದೆ. ಈ ಹೊಸ ಮಾದರಿಯು ಗ್ಯಾಲಕ್ಸಿ ಎಂ16 5ಜಿಯ ಯಶಸ್ಸಿನ ಆಧಾರದ ಮೇಲೆ ಅಭಿವೃದ್ಧಿಪಡಿಸಲ್ಪಟ್ಟಿದ್ದು, ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆವಿಷ್ಕಾರಗಳನ್ನು ಸಾಮಾನ್ಯ ಬಳಕೆದಾರರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ.
ಗ್ರಾಹಕರು ಪ್ರಮುಖ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ ಪಾಲುದಾರರ ಮೂಲಕ 3 ತಿಂಗಳವರೆಗೆ “ನೋ ಕಾಸ್ಟ್ ಇಎಂಐ” ಸೌಲಭ್ಯ ಪಡೆಯಬಹುದು.
“ನೋ ಶೇಕ್ ಕ್ಯಾಮೆರಾ” — ಸ್ಪಷ್ಟ ಫೋಟೋಗಳಿಗೆ ಹೊಸ ಪರಿಹಾರ: ಈ ಫೋನ್‌ನ ಮುಖ್ಯ ಆಕರ್ಷಣೆ 50MP OIS ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ, ಇದು ಮಸುಕಾದ ಚಿತ್ರಗಳನ್ನು ತಪ್ಪಿಸಿ ಕಂಪನ ರಹಿತ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲ್ಟ್ರಾ-ವೈಡ್ ಮತ್ತು ಮ್ಯಾಕ್ರೋ ಕ್ಯಾಮೆರಾ ಸೇರಿ ತ್ರಿ-ಲೆನ್ಸ್ ಸೆಟಪ್ ನೀಡಿದ್ದು, ಪ್ರತಿ ದೃಶ್ಯಕ್ಕೂ ಸೂಕ್ತ ಫ್ರೇಮಿಂಗ್ ಒದಗಿಸುತ್ತದೆ. ಮುಂಭಾಗದಲ್ಲಿ 13MP ಹೈ-ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾ ಇದ್ದು, ಅದ್ಭುತ ಸೆಲ್ಫಿ ಅನುಭವ ನೀಡುತ್ತದೆ.
ವಿನ್ಯಾಸ ಮತ್ತು ದೃಢತೆ: ಗ್ಯಾಲಕ್ಸಿ ಎಂ17 5ಜಿ ಕೇವಲ 7.5ಮಿಮೀ ತೆಳ್ಳಗಿದ್ದು, ಪ್ರೀಮಿಯಂ ಕ್ಯಾಮೆರಾ ಡೆಕೋ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಒಳಗೊಂಡಿದೆ. ಇದು ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ IP54 ರೇಟಿಂಗ್ ಹೊಂದಿದೆ.
ಈ ಫೋನ್ ಮೂನ್‌ಲೈಟ್ ಸಿಲ್ವರ್ ಮತ್ತು ಸಫೈರ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.
ಎಐ ಆವಿಷ್ಕಾರಗಳ ಹೊಸ ಹಾದಿ: ಗ್ಯಾಲಕ್ಸಿ ಎಂ17 5ಜಿಯಲ್ಲಿ ಸ್ಯಾಮ್‌ಸಂಗ್ ಗೂಗಲ್ ಜೊತೆಗೆ ಅಭಿವೃದ್ಧಿಪಡಿಸಿದ “Circle to Search” ಫೀಚರ್ ಅನ್ನು ಪರಿಚಯಿಸಿದೆ. ಅದೇ ರೀತಿಯಲ್ಲಿ, ಜೆಮಿನಿ ಲೈವ್ (Gemini Live) ವೈಶಿಷ್ಟ್ಯವು ಎಐ ಆಧಾರಿತ ದೃಶ್ಯ ಸಂವಹನ ಅನುಭವವನ್ನು ಒದಗಿಸುತ್ತದೆ. ಫೋನ್ ಆಂಡ್ರಾಯ್ಡ್ 15 ಮತ್ತು ಒನ್ ಯುಐ 7 ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶುದ್ಧ ಮತ್ತು ನಯವಾದ ಬಳಕೆದಾರ ಅನುಭವ ನೀಡುತ್ತದೆ.
ಶಕ್ತಿಶಾಲಿ ಪ್ರದರ್ಶನ: ಈ ಫೋನ್‌ನಲ್ಲಿ 6.7 ಇಂಚಿನ ಎಫ್‌ಎಚ್‌ಡಿ+ ಸೂಪರ್ ಅಮೋಲ್ಡ್ ಡಿಸ್‌ಪ್ಲೇ, 1100 ನಿಟ್ಸ್ ಬ್ರೈಟ್‌ನೆಸ್ ಮತ್ತು 6nm ಎಕ್ಸಿನೋಸ್ 1330 ಪ್ರೊಸೆಸರ್ ಇದ್ದು, ವೇಗದ ಮತ್ತು ಶಕ್ತಿ-ದಕ್ಷ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಮಲ್ಟಿಟಾಸ್ಕಿಂಗ್ ಹಾಗೂ ಗೇಮಿಂಗ್‌ಗಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ.
ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ17 5ಜಿ ಬಳಕೆದಾರರಿಗೆ 6 ಜನರೇಷನ್‌ಗಳ ಓಎಸ್ ಅಪ್‌ಡೇಟ್ ಮತ್ತು 6 ವರ್ಷಗಳ ಭದ್ರತಾ ನವೀಕರಣ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, ಆನ್-ಡಿವೈಸ್ ವಾಯ್ಸ್ ಮೇಲ್ ಫೀಚರ್‌ನಿಂದ ಕರೆ ಸ್ವೀಕರಿಸದಿದ್ದಾಗ ಕರೆಮಾಡುವವರಿಗೆ ಸ್ವಯಂ ಸಂದೇಶ ಕಳುಹಿಸಲಾಗುತ್ತದೆ — ಇದು ಈ ವಿಭಾಗದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಗ್ಯಾಲಕ್ಸಿ ಎಂ17 5ಜಿ — ಸ್ಯಾಮ್‌ಸಂಗ್‌ನ ಅತ್ಯಾಧುನಿಕ ತಂತ್ರಜ್ಞಾನ, ಪ್ರೀಮಿಯಂ ವಿನ್ಯಾಸ ಮತ್ತು ಎಐ ವೈಶಿಷ್ಟ್ಯಗಳ ಸಂಯೋಜನೆ, 10–15 ಸಾವಿರ ರೂ. ವಿಭಾಗದಲ್ಲಿ ಸ್ಮಾರ್ಟ್‌ಫೋನ್‌ಗಳ ಹೊಸ ಮಾನದಂಡವನ್ನು ಸ್ಥಾಪಿಸಿದೆ.