ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಮರಕಡ ಬಳಿ ಜೋಡಿಯೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಬಡಗಮಿಜಾರಿನ ವಿವಾಹಿತೆ ನಮಿಕ್ಷಾ ಶೆಟ್ಟಿ (29ವ)ಹಾಗೂ ಆಕೆಯ ಪ್ರಿಯಕರ ಚಾಲಕ ವೃತ್ತಿ ಮಾಡುತ್ತಿದ್ದ ನಿಡ್ಡೋಡಿಯ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡವರು.
ನಮೀಕ್ಷಾಗೆ ಮದುವೆಯಾಗಿದ್ದು ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಪತಿ ಸತೀಶ್ ಪೂನಾದಲ್ಲಿ ಉದ್ಯೋಗದಲ್ಲಿದ್ದಾರೆ. ಮೂಲತ: ಬಾಗಲ್ ಕೋಟೆಯ ನಿವಾಸಿಯಾಗಿದ್ದ ಪ್ರಶಾಂತ್ ಗೂ ಬಾಗಲ್ ಕೋಟೆಯಲ್ಲಿ ಮದುವೆಯಾಗಿದ್ದು ವಿಚ್ಛೇದನ ಆಗಿದೆ ಎನ್ನಲಾಗಿದೆ.
ನಮೀಕ್ಷಾಗೆ ಕಳೆದ ಕೆಲವು ಸಮಯಗಳ ಹಿಂದೆ ಇನ್ಟಾಗ್ರಾಂ ಮೂಲಕ ಪ್ರಶಾಂತ್ ನ ಪರಿಚಯವಾಗಿದ್ದು ನಂತರ ಪ್ರೇಮ ಸಂಬಂಧಕ್ಕೆ ತಿರುಗಿತ್ತೆನ್ನಲಾಗಿದ. ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಪ್ರಾರಂಭಗೊಂಡಿದ್ದು ಅದು ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಮೂಲಕ ಅಂತ್ಯಗೊಂಡಿದೆ.
ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.