ಕೊಪ್ಪಳ: ಆರ್‌ಎಸ್‌ಎಸ್ ಬ್ಯಾನ್ ಯಾಕೆ ಮಾಡಬಾರದು. ಹಿಂದೆ ಮೂರು ಬಾರಿ ಬ್ಯಾನ್ ಮಾಡಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಯಾಕೆ ಬ್ಯಾನ್ ಮಾಡಬಾರದು. ಈ ಹಿಂದೆ ವಲ್ಲಭಭಾಯಿ ಪಟೇಲ್ ಬ್ಯಾನ್ ಮಾಡಿದ್ದರು. ಈ ರೀತಿ ಕೋಮು ಗಲಭೆ ಮಾಡುತ್ತಾ ಹೊರಟರೆ, ಬ್ಯಾನ್ ಮಾಡಿದರೆ ತಪ್ಪೇನು?. ಅದನ್ನು ಬ್ಯಾನ್ ಮಾಡಿ, ಇದನ್ನು ಬ್ಯಾನ್ ಮಾಡಿ ಎಂದು ಸಲಹೆ ಕೊಡುತ್ತಾರೆ. ಇವತ್ತು ಉಡುಪಿ, ಮಂಗಳೂರ ಏನಾಗಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ಯಾವ ನಾಯಕರ ಮಕ್ಕಳು ಆರ್‌ಎಸ್‌ಎಸ್‌ನಲ್ಲಿ ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಅಮಿತ್ ಶಾ, ಆರ್.ಅಶೋಕ, ಅರವಿಂದ ಬೆಲ್ಲದ ಮಕ್ಕಳು ಎಲ್ಲಿದ್ದಾರೆ?. ಶಿವು ಉಪ್ಪಾರ ಯಾರೂ?. ಬಡವರ ಮಗ. ಸಿ.ಟಿ. ರವಿ, ಕಟೀಲು ಮಕ್ಕಳು ಎಲ್ಲಿದ್ದಾರೆ ಎಂದು ಕೇಳಿದರು.