Home ತಾಜಾ ಸುದ್ದಿ ತೀವ್ರಗೊಂಡ ಮಳೆ: ಮಹಿಳೆ ಸಾವು

ತೀವ್ರಗೊಂಡ ಮಳೆ: ಮಹಿಳೆ ಸಾವು


ಮಂಗಳೂರು: ಮಂಗಳವಾರ ಕೊಂಚ ವಿರಾಮ ಪಡೆದುಕೊಂಡಿದ್ದ ಮಳೆ ಇಂದು ಮತ್ತೆ ತೀವ್ರವಾಗಿದೆ. ಕಳೆದ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯ ಅಲ್ಲಲ್ಲಿ ಭೂ ಕುಸಿತ, ಮನೆ ಕುಸಿತದ ಘಟನೆಗಳು ನಡೆದಿದೆ. ವಿವಿದೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿ ಕೃತಕ ನೆರೆಯಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೂಡುಬಿದಿರೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ.ಪಂ. ವ್ಯಾಪ್ತಿಯ ಹೊಸಮಾರಪದವಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಲಿಲ್ಲಿ ಡಿಸೋಜ (೫೩) ಎಂಬವರು ಮೃತಪಟ್ಟಿದ್ದಾರೆ. ಮನೆಯ ಮೇಲೆ ವಿದ್ಯುತ್ ತಂತಿ ಹರಿದುಹೋಗಿದ್ದು, ಮರದ ಕೊಂಬೆ ಮೇಲೆ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು, ವಿದ್ಯುತ್ ತಂತಿ ಕೆಳಗೆ ಬಿದ್ದ ಕಾರಣ ಸಾವು ಸಂಭವಿಸಿದೆ. ಇಂದು ಬೆಳಗ್ಗಿನ ೮.೩೦ರ ತನಕ ಕಳೆದ ೨೪ ತಾಸಿನಲ್ಲಿ ಜಿಲ್ಲೆಯಾದ್ಯಂತ ೫೨.೪ ಮಿಲಿ ಮೀಟರ್ ಮಳೆಯಾಗಿದೆ.

Exit mobile version