Tamil Nadu Archives - Samyukta Karnataka

ಸಿಎಂ ವಿಜಯ್ ಕೊಲ್ಲೂರು ಭೇಟಿ: ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ ನಿರ್ಬಂಧ, ‘ಝಡ್ ಪ್ಲಸ್’ ಭದ್ರತೆ
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಜೂನ್ 12ರ ಶುಕ್ರವಾರದಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ದೇವಳದ ಸುತ್ತಮುತ್ತ ಹಾಗೂ ಸಂಚಾರ ಮಾರ್ಗದುದ್ದಕ್ಕೂ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಅತ್ಯಂತ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

ಮುಖ್ಯಮಂತ್ರಿ ವಿಜಯ್ ಮಧ್ಯಾಹ್ನ 12:30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣಿಸಲಿದ್ದು, ಭದ್ರತೆಯ ದೃಷ್ಟಿಯಿಂದ ದಾರಿಯುದ್ದಕ್ಕೂ ವ್ಯಾಪಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಎಂ ವಿಜಯ್ ‘ಝಡ್ ಪ್ಲಸ್’ (Z+) ಭದ್ರತೆ ಹೊಂದಿರುವುದರಿಂದ, ಉಭಯ ರಾಜ್ಯಗಳ ಡಿಐಜಿ ಮತ್ತು ಎಸ್‌ಪಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ದರ್ಶನ ಸಮಯ ಪ್ರಕಟಣೆ ಮತ್ತು ಸಾರ್ವಜನಿಕರಿಗೆ ನಿರ್ಬಂಧ: ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ದೇವರ ದರ್ಶನವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಿಎಂ ವಿಜಯ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರಾದರೂ, ಯಾವುದೇ ಸಾರ್ವಜನಿಕ ಸಭೆ ಅಥವಾ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ದರ್ಶನದ ಬಳಿಕ ರಸ್ತೆ ಮಾರ್ಗವಾಗಿ ಮತ್ತೆ ಮಂಗಳೂರಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿಗೆ ವಾಪಸಾಗಲಿದ್ದಾರೆ.

ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ: ಇದೇ ವೇಳೆ ತಮಿಳುನಾಡು ಸಿಎಂ ಭೇಟಿಗೆ ಕರ್ನಾಟಕದಲ್ಲಿ ವಿರೋಧವೂ ವ್ಯಕ್ತವಾಗಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ, ಕೊಲ್ಲೂರಿಗೆ ಆಗಮಿಸಲಿರುವ ಸಿಎಂ ವಿಜಯ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹದ್ದಿನ ಕಣ್ಣಿಟ್ಟಿದ್ದಾರೆ.

The post ಸಿಎಂ ವಿಜಯ್ ಕೊಲ್ಲೂರು ಭೇಟಿ: ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ ನಿರ್ಬಂಧ, ‘ಝಡ್ ಪ್ಲಸ್’ ಭದ್ರತೆ appeared first on Samyukta Karnataka.

ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ
‘16 ವಯತಿನಿಲೆ’ ಸೃಷ್ಟಿಕರ್ತ ಭಾರತಿರಾಜಾ ಸಿನಿಪಯಣದಲ್ಲಿ ಮಗ ಮನೋಜ್ ಅಗಲಿಕೆಯ ನೋವಿನ ಬಳಿಕ ಇಂದು ವಿದಾಯ: ಸಿನಿರಂಗ ಶೋಕಸಾಗರ

ಚೆನ್ನೈ: ತಮಿಳು ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಭಾರತಿರಾಜಾ ಅವರು ಬುಧವಾರ (ಜೂನ್ 10) ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಮಿಳು ಹಾಗೂ ಭಾರತೀಯ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಮತ್ತು ಲಕ್ಷಾಂತರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ‘ಇಯಕ್ಕುನರ್ ಇಮಾಯಂ’ (ನಿರ್ದೇಶಕರ ಶಿಖರ) ಎಂದೇ ಜನಪ್ರಿಯರಾಗಿದ್ದ ಭಾರತಿರಾಜಾ, ತಮಿಳು ಸಿನಿಮಾಗಳನ್ನು ಸ್ಟುಡಿಯೋಗಳ ಗೋಡೆಗಳ ಹೊರಗೆ ಕರೆದುಕೊಂಡು ಹೋಗಿ ನೈಜ ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅವರ ನಿಧನದೊಂದಿಗೆ ಭಾರತೀಯ ಸಿನಿರಂಗದ ಸುವರ್ಣ ಅಧ್ಯಾಯವೊಂದು ಮುಕ್ತಾಯಗೊಂಡಂತಾಗಿದೆ.

‘16 ವಯತಿನಿಲೆ’ ಮೂಲಕ ಆರಂಭವಾದ ಕ್ರಾಂತಿ : 1941ರ ಜುಲೈ 17ರಂದು ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ಜನಿಸಿದ ಭಾರತಿರಾಜಾ, 1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ (16 Vayathinile) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಆ ಕಾಲದಲ್ಲಿ ಹೆಚ್ಚಿನ ಚಿತ್ರಗಳು ಸ್ಟುಡಿಯೋಗಳಲ್ಲೇ ಚಿತ್ರೀಕರಿಸಲಾಗುತ್ತಿದ್ದರೆ, ಅವರು ನೈಜ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಿ ಹೊಸ ಸಂಪ್ರದಾಯವನ್ನು ಆರಂಭಿಸಿದರು. ಈ ಚಿತ್ರವು ಗ್ರಾಮೀಣ ಜೀವನವನ್ನು ನೈಜವಾಗಿ ತೆರೆಮೇಲೆ ತಂದ ಮೊದಲ ಪ್ರಯತ್ನಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.

ಈ ಚಿತ್ರದ ಮೂಲಕ ಶ್ರೀದೇವಿ, ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌ ಅವರ ವೃತ್ತಿಜೀವನಕ್ಕೂ ಮಹತ್ವದ ತಿರುವು ಸಿಕ್ಕಿತು ಎಂದು ಸಿನಿ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಬಳಿಕ ಅವರು ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

ನಾಲ್ಕು ದಶಕಗಳ ಅದ್ಭುತ ಪಯಣ : ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಭಾರತಿರಾಜಾ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದರು. Mudhal Mariyathai, Sigappu Rojakkal, Alaigal Oivathillai, Vedham Pudhithu, Karuththamma ಹಾಗೂ Kizhakku Cheemayile ಸೇರಿದಂತೆ ಅನೇಕ ಚಿತ್ರಗಳು ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಗಳಿಸಿದ್ದವು.

ಅವರ ಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಜಾತಿ ವ್ಯವಸ್ಥೆ, ಮಹಿಳಾ ಸಮಸ್ಯೆಗಳು, ಗ್ರಾಮೀಣ ಬದುಕಿನ ಸಂಕಷ್ಟಗಳು ಹಾಗೂ ಮಾನವ ಸಂಬಂಧಗಳ ಸೂಕ್ಷ್ಮತೆಗಳನ್ನು ಆಳವಾಗಿ ಚಿತ್ರಿಸುತ್ತಿದ್ದವು. ಇದೇ ಕಾರಣಕ್ಕೆ ಅವರ ಚಿತ್ರಗಳು ಇಂದಿಗೂ ಸಿನೆಮಾ ವಿದ್ಯಾರ್ಥಿಗಳಿಗೆ ಅಧ್ಯಯನದ ವಿಷಯವಾಗಿವೆ.

ಪ್ರಶಸ್ತಿಗಳು : ಭಾರತಿರಾಜಾ ತಮ್ಮ ವಿಶಿಷ್ಟ ಚಿತ್ರಕಥೆ ಮತ್ತು ನಿರ್ದೇಶನಕ್ಕಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಜೊತೆಗೆ 2004ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವಕ್ಕೂ ಭಾಜನರಾಗಿದ್ದರು. ಅವರ ಕೊಡುಗೆಗಾಗಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ವೈಯಕ್ತಿಕ ದುಃಖದ ನಡುವೆಯೇ ಅಂತಿಮ ದಿನಗಳು: 2025ರಲ್ಲಿ ಅವರ ಪುತ್ರ ಹಾಗೂ ನಟ ಮನೋಜ್‌ ಭಾರತಿರಾಜಾ ಹೃದಯಾಘಾತದಿಂದ ನಿಧನರಾದುದು ಭಾರತಿರಾಜಾ ಅವರಿಗೆ ಭಾರೀ ಆಘಾತವಾಗಿತ್ತು. ಆ ಬಳಿಕ ಅವರ ಆರೋಗ್ಯದಲ್ಲಿ ಕುಸಿತ ಕಂಡುಬಂದಿತ್ತು ಎಂದು ಕುಟುಂಬದ ಆಪ್ತರು ಮತ್ತು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ಕೆಲವು ತಿಂಗಳುಗಳಿಂದ ಅವರು ಉಸಿರಾಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಸಂತಾಪಗಳ ಮಹಾಪೂರ : ಭಾರತಿರಾಜಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. ನಟಿ ಖುಷ್ಬೂ ಸುಂದರ್ ಅವರು ಭಾರತಿರಾಜಾ ಅವರೊಂದಿಗೆ ಕೆಲಸ ಮಾಡುವ ಕನಸು ನನಸಾಗಲಿಲ್ಲ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಹಲವು ನಿರ್ದೇಶಕರು ಮತ್ತು ನಟರು ಅವರನ್ನು “ತಮಿಳು ಸಿನಿಮಾದ ಪಾಠಪುಸ್ತಕ” ಎಂದು ಕೊಂಡಾಡಿದ್ದಾರೆ.

ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರಗಳು ಮತ್ತು ನೆನಪುಗಳನ್ನು ಹಂಚಿಕೊಳ್ಳುತ್ತಾ, “ತಮಿಳು ಸಿನಿರಂಗದ ಒಂದು ಯುಗ ಅಂತ್ಯಗೊಂಡಿದೆ” ಎಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಮರೆಯಲಾಗದ ಪರಂಪರೆ : ಗ್ರಾಮೀಣ ಬದುಕಿನ ಸೊಗಡನ್ನು ನೈಜವಾಗಿ ಚಿತ್ರಿಸಿ, ಹೊಸ ಕಲಾವಿದರಿಗೆ ಅವಕಾಶ ನೀಡಿ, ಸಾಮಾಜಿಕ ವಿಷಯಗಳನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸಿದ ಭಾರತಿರಾಜಾ ಭಾರತೀಯ ಸಿನಿರಂಗದಲ್ಲಿ ಸದಾ ಜೀವಂತವಾಗಿರಲಿದ್ದಾರೆ. ಅವರ ಸಿನಿಮಾಗಳು ಮುಂದಿನ ಪೀಳಿಗೆಯ ನಿರ್ದೇಶಕರಿಗೆ ಮಾರ್ಗದರ್ಶಕವಾಗಿದ್ದು, ಅವರ ಪರಂಪರೆ ಇನ್ನೂ ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಪ್ರತಿಧ್ವನಿಸಲಿದೆ.

The post ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ appeared first on Samyukta Karnataka.

ಬಿಜೆಪಿ ಬದಿಗಿಟ್ಟು ತಮಿಳುನಾಡಲ್ಲಿ ಅಣ್ಣಾಮಲೈ ಸ್ವತಂತ್ರ ಹೋರಾಟ?
ಚೆನ್ನೈ: ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಕಮಲ ಪಾರ್ಟಿಯನ್ನು ತ್ಯಜಿಸಿ ಹೊಸ ಪಕ್ಷ ಸ್ಥಾಪನೆ ಮಾಡುವರೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ಮಧುರೈ, ಕೊಯಮತ್ತೂರಿನಲ್ಲಿ ಅಣ್ಣಾಮಲೈ ಬೆಂಬಲಿಗರಿಂದ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಅಣ್ಣಾಮಲೈ 2.0 ಎನ್ನುವ ಸಂದೇಶವಿದೆ. ಅಂದರೆ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಸಂದೇಶವನ್ನು ಈ ಮೂಲಕ ಸೂಕ್ಷ್ಮವಾಗಿ ನೀಡಲಾಗಿದೆ. ಇನ್ನೊಂದು ಪೋಸ್ಟರ್‌ನಲ್ಲಿ ‘ನಿರ್ಭೀತ ವ್ಯಕ್ತಿತ್ವಕ್ಕೆ ಯಾವುದೇ ಮಿತಿ ಇರುವುದಿಲ್ಲ’ ಎನ್ನುವ ಮಾತೂ ಇದೆ. ಬಿಜೆಪಿಯನ್ನು ಬದಿಗಿಟ್ಟು ಸ್ವತಂತ್ರ ಆಂದೋಲನವನ್ನೂ ಶುರು ಮಾಡಲು ಅಣ್ಣಾಮಲೈ, ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ವಿದೇಶದಿಂದ ಸೋಮವಾರ ವಾಪಸ್ಸಾಗಿರುವ ಆಣ್ಣಾಮಲೈ, ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೆರಡು ದಿನ ಕಾಯಿರಿ ಎಂದು ಹೇಳಿದ್ದಾರೆ. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅಣ್ಣಾಮಲೈ ಈಗಾಗಲೇ ಬಿಜೆಪಿ ರಾಜ್ಯ ಸಮಿತಿಯ ಎರಡು ಸಭೆಗಳಿಗೆ ಗೈರುಹಾಜರಾಗಿರುವುದೂ ಅವರು ಹೊಸ ಪಕ್ಷ ಹುಟ್ಟುಹಾಕುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಅಣ್ಣಾಮಲೈಗೆ ಬಿಜೆಪಿ ನಾಯಕರಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಅವರೊಂದಿಗೆ ಯಾವುದೇ ಮನಸ್ತಾಪವಿಲ್ಲ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಎಲ್.ಸಂತೋಷ್ ಜೊತೆಯೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಆದರೆ ಕೆಲವೊಂದು ವೈಚಾರಿಕ ಸಂಗತಿಗಳು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. ಇತ್ತೀಚೆಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ಭ್ರಷ್ಟಾಚಾರದಿಂದ ಹೆಸರು ಕೆಡಿಸಿಕೊಂಡಿರುವ ಎಐಎಡಿಎಂಕೆ ಜೊತೆ ಮೈತ್ರಿ ಬೇಡ ಎನ್ನುವ ನಿಲುವನ್ನು ತಳೆದಿದ್ದರು. ಪಕ್ಷದ ಕೇಂದ್ರ ವರಿಷ್ಠರಿಗೂ ತಿಳಿಸಿದ್ದರು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿಯಿಲ್ಲದೆ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದರು. ಇದರ ಜೊತೆಗೆ ಚುನಾವಣೆಗೆ ಮೊದಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಅಣ್ಣಾಮಲೈಗೆ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿ ಕೊಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಕೊಟ್ಟಿಲ್ಲ. ಇವೆಲ್ಲವೂ ಅಣ್ಣಾಮಲೈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

The post ಬಿಜೆಪಿ ಬದಿಗಿಟ್ಟು ತಮಿಳುನಾಡಲ್ಲಿ ಅಣ್ಣಾಮಲೈ ಸ್ವತಂತ್ರ ಹೋರಾಟ? appeared first on Samyukta Karnataka.

ದೆಹಲಿಯಲ್ಲಿ ಪ್ರಧಾನಿ ಮೋದಿ-ಸಿಎಂ ವಿಜಯ್ ಹೈವೋಲ್ಟೇಜ್ ಮೀಟಿಂಗ್ ಯಾಕೆ ಗೊತ್ತಾ?
ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸೂಪರ್‌ಸ್ಟಾರ್ ಹಾಗೂ ರಾಜಕೀಯ ನಾಯಕ ವಿಜಯ್ ಮೊದಲ ಬಾರಿಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ದೇಶದ ಪ್ರಧಾನಿಗಳನ್ನು ಭೇಟಿಯಾಗುತ್ತಿರುವುದು ಉಭಯ ನಾಯಕರ ನಡುವಿನ ರಾಜತಾಂತ್ರಿಕ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ ನಡೆ ಎನ್ನಲಾಗುತ್ತಿದೆ.

ಸೌಹಾರ್ದಯುತವಾಗಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ತಮಿಳುನಾಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ನಡೆಸಲಾಗಿತ್ತು. ಪ್ರಮುಖವಾಗಿ ರಾಜ್ಯದ ಮೂಲಸೌಕರ್ಯ ಯೋಜನೆಗಳು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ತಮಿಳುನಾಡಿಗೆ ಸಿಗಬೇಕಾದ ಆರ್ಥಿಕ ಅನುದಾನಗಳ ಬಿಡುಗಡೆ ಕುರಿತು ಸಿಎಂ ವಿಜಯ್, ಪ್ರಧಾನಿ ಮೋದಿ ಜೊತೆಗೆ ಸವಿಸ್ತಾರವಾಗಿ ಚರ್ಚಿಸಿದರು. ರಾಜ್ಯದ ರೈತರ ಹಿತರಕ್ಷಣೆ ಮತ್ತು ಕೈಗಾರಿಕಾ ಪ್ರಗತಿಗೆ ಕೇಂದ್ರದ ಸಹಕಾರ ಅಗತ್ಯ ಎಂದು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಒಕ್ಕೂಟ ವ್ಯವಸ್ಥೆಯ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಸಾಕ್ಷಿಯಾಗಿದೆ. ತಮಿಳುನಾಡಿನ ಜನತೆಯ ಕಲ್ಯಾಣಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೇಂದ್ರ ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಸಿಎಂ ವಿಜಯ್ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ನೂತನ ಮುಖ್ಯಮಂತ್ರಿಗಳಿಗೆ ಶುಭ ಕೋರಿದ್ದು, ತಮಿಳುನಾಡಿನ ಪ್ರಗತಿಗೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಅಗತ್ಯ ನೆರವು ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಒಟ್ಟಾರೆಯಾಗಿ.. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಈ ದೆಹಲಿ ಪ್ರವಾಸವು ಯಶಸ್ವಿಯಾಗಿದ್ದು, ತಮಿಳುನಾಡಿನ ನೂತನ ಆಡಳಿತಕ್ಕೆ ಹೊಸ ದಿಕ್ಸೂಚಿ ನೀಡುವ ಮುನ್ಸೂಚನೆ ನೀಡಿದೆ.

The post ದೆಹಲಿಯಲ್ಲಿ ಪ್ರಧಾನಿ ಮೋದಿ-ಸಿಎಂ ವಿಜಯ್ ಹೈವೋಲ್ಟೇಜ್ ಮೀಟಿಂಗ್ ಯಾಕೆ ಗೊತ್ತಾ? appeared first on Samyukta Karnataka.

ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5 ಶೋಗಳಿಗೆ ಗ್ರೀನ್ ಸಿಗ್ನಲ್!
ಚೆನ್ನೈ: ತಮಿಳುನಾಡಿನಲ್ಲಿ ಇನ್ಮುಂದೆ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳು ಮೊದಲ 7 ದಿನಗಳ ಕಾಲ ದಿನಕ್ಕೆ ಐದು ಪ್ರದರ್ಶನಗಳನ್ನು ಕಾಣಲಿವೆ. ಚಿತ್ರರಂಗದ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಪ್ರತಿದಿನ 5 ಪ್ರದರ್ಶನಗಳಿಗೆ ಅಧಿಕೃತವಾಗಿ ಅನುಮತಿ ನೀಡಿದ್ದಾರೆ.

ಚಿತ್ರರಂಗದ ಪ್ರತಿನಿಧಿಗಳ ಮನವಿ: ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರೋದ್ಯಮದ ಪ್ರಮುಖ ಪ್ರತಿನಿಧಿಗಳು ಮೇ 16 ರಂದು ಮುಖ್ಯಮಂತ್ರಿ ವಿಜಯ್ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದರು. ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಈ ಕೋರಿಕೆಯನ್ನು ಪುರಸ್ಕರಿಸಿರುವ ಸಿಎಂ, ಚಿತ್ರೋದ್ಯಮದ ಹಿತದೃಷ್ಟಿಯಿಂದ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಕಚೇರಿ (CMO) ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಹಳೇ ನಿಯಮ ಬದಲಾವಣೆ: ಚಿತ್ರಮಂದಿರಗಳ ನಿಯಮ 14-ಎ ಪ್ರಕಾರ, ತಮಿಳುನಾಡಿನಲ್ಲಿ ಈವರೆಗೆ ದಿನಕ್ಕೆ ಕೇವಲ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅವಕಾಶವಿತ್ತು. ಹಬ್ಬ ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷವಾಗಿ ಒಂದು ಹೆಚ್ಚುವರಿ ಪ್ರದರ್ಶನಕ್ಕೆ (ಒಟ್ಟು 5 ಪ್ರದರ್ಶನ) ಸರ್ಕಾರ ಅನುಮತಿ ನೀಡುತ್ತಿತ್ತು. ಆದ್ರೆ ಈಗಿನ ಹೊಸ ಆದೇಶದ ಪ್ರಕಾರ, ಯಾವುದೇ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ (7 ದಿನಗಳು) ಪ್ರತಿದಿನ 5 ಪ್ರದರ್ಶನಗಳನ್ನು ಪ್ರದರ್ಶಿಸಬಹುದಾಗಿದೆ.

ಮುಖ್ಯಮಂತ್ರಿಗಳ ಈ ಹೊಸ ನಿರ್ಧಾರದಿಂದಾಗಿ ತಮಿಳು ಚಿತ್ರರಂಗದ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಹರ್ಷ ವ್ಯಕ್ತಪಡಿಸಿದ್ದು, ಇದು ತಮಿಳು ಚಿತ್ರೋದ್ಯಮದ ವ್ಯವಹಾರಕ್ಕೆ ದೊಡ್ಡ ಮಟ್ಟದ ಬೂಸ್ಟರ್ ಡೋಸ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5 ಶೋಗಳಿಗೆ ಗ್ರೀನ್ ಸಿಗ್ನಲ್! appeared first on Samyukta Karnataka.

ದಳಪತಿ ವಿಜಯ್ ಕೈ ಸೇರಿದ ಕಿಂಗ್ ಕೊಹ್ಲಿ ಬ್ಯಾಟ್: ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್!
ಚೆನ್ನೈ: ಸಿನಿ ಜಗತ್ತಿನಿಂದ ಖ್ಯಾತಿ ಗಳಿಸಿ, ನಂತರ ರಾಜಕೀಯದಲ್ಲೂ ಮಿಂಚುತ್ತಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್, ಭಾರತದ ಮುಂಚೂಣಿಯ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್‌ಎಫ್ (MRF) ನಿಯೋಗವು ಸೌಜನ್ಯಯುತವಾಗಿ ಭೇಟಿ ಮಾಡಿದೆ. ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ನಡೆದ ಈ ವಿಶೇಷ ಭೇಟಿಯ ಸಂದರ್ಭದಲ್ಲಿ, ಸಂಸ್ಥೆಯ ಉನ್ನತ ಅಧಿಕಾರಿಗಳು ಸಿಎಂ ವಿಜಯ್‌ಗೆ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹಿ ಮಾಡಿರುವ ಅಪರೂಪದ ಕ್ರಿಕೆಟ್ ಬ್ಯಾಟ್‌ನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದ್ದಾರೆ.

ಈ ಮಹತ್ವದ ಸಭೆಯಲ್ಲಿ ತಮಿಳುನಾಡಿನಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುವ ಹಾಗೂ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೈಜೋಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಹಾಗೂ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಂಆರ್‌ಎಫ್ ಸಂಸ್ಥೆಗೆ ವಿರಾಟ್ ಕೊಹ್ಲಿ ದೀರ್ಘಕಾಲದಿಂದ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಹಸ್ತಾಕ್ಷರವಿರುವ ಬ್ಯಾಟ್‌ನ್ನು ಸಿಎಂಗೆ ಉಡುಗೊರೆಯಾಗಿ ನೀಡಲಾಗಿದೆ.

ಹಾಗೇ.. ಪ್ರಮುಖ ಕ್ರೀಡಾ ವಿಶ್ಲೇಷಕ ಮುಫದ್ದಲ್ ವೋಹ್ರಾ ಈ ಭೇಟಿಯ ಕುರಿತು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಳಪತಿ ವಿಜಯ್ ಎಂಆರ್‌ಎಫ್ ತಂಡದಿಂದ ಬ್ಯಾಟ್ ಸ್ವೀಕರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಅಷ್ಟೇ ಅಲ್ಲದೆ.. ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಲೋಕದ ಈ ಅಪರೂಪದ ಸಮ್ಮಿಲನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಜಯ್ ಮತ್ತು ವಿರಾಟ್ ಕೊಹ್ಲಿ ಇಬ್ಬರ ಅಭಿಮಾನಿಗಳು ಜಂಟಿಯಾಗಿ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಕಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

The post ದಳಪತಿ ವಿಜಯ್ ಕೈ ಸೇರಿದ ಕಿಂಗ್ ಕೊಹ್ಲಿ ಬ್ಯಾಟ್: ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್! appeared first on Samyukta Karnataka.

ʻನಮ್ಮ ಸಿಎಂ, ನಮ್ಮ ಆಸ್ತಿʼ: ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿಜಯ್ ಫೋಟೋ ವೈರಲ್
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ದಳಪತಿ ಜೋಸೆಫ್ ವಿಜಯ್ ತಮ್ಮ ವಿಭಿನ್ನ ಹಾಗೂ ದೃಢ ನಿರ್ಧಾರಗಳಿಂದ ದೇಶದ ಗಮನ ಸೆಳೆಯುತ್ತಿದ್ದಾರೆ. ಮೂರು ದಶಕಗಳ ಕಾಲ ಕಾಲಿವುಡ್‌ನ ಸ್ಟಾರ್ ನಟನಾಗಿ ಮಿಂಚಿದ್ದ ವಿಜಯ್, ಈಗ ರಾಜಕಾರಣಿಯಾಗಿಯೂ ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಇತ್ತೀಚೆಗಷ್ಟೇ ಶಾಲೆ, ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳ ಸಮೀಪವಿದ್ದ ಮದ್ಯದಂಗಡಿಗಳನ್ನು ಮುಚ್ಚಿಸುವ ಮೂಲಕ ಮತ್ತು ಮಾದಕವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ವಿಜಯ್ ವ್ಯಾಪಕ ಜನಮೆಚ್ಚುಗೆ ಗಳಿಸಿದ್ದರು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸರಳತೆಯನ್ನು ಬಿಂಬಿಸುವ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ತಮ್ಮ ಸೀಟಿನಲ್ಲೇ ಕುಳಿತು, ಮನೆಯಿಂದ ತಂದಿರುವ ಲಂಚ್ ಬಾಕ್ಸ್ ಓಪನ್ ಮಾಡುತ್ತಿರುವ ದೃಶ್ಯ ಈ ಫೋಟೋದಲ್ಲಿದೆ. ತಮಿಳುನಾಡಿನ ಅತ್ಯುನ್ನತ ಅಧಿಕಾರದಲ್ಲಿದ್ದರೂ CM ವಿಜಯ್‌ ಪಾಲಿಸುತ್ತಿರುವ ಈ ಸಾಧಾರಣ ಜೀವನಶೈಲಿ ಎಲ್ಲನ್ನು ಹುಬ್ಬೇರಿಸುವಂತೆ ಮಾಡಿದೆ.

ನಾಲ್ಕು ತಟ್ಟೆಗಳ ಸ್ಟೀಲ್ ಲಂಚ್ ಬಾಕ್ಸ್ ಹೊಂದಿರುವ ಈ ಫೋಟೋವನ್ನು ‘ಸಿಎಂ ಜೋಸೆಫ್ ವಿಜಯ್ ಅಫೀಶಿಯಲ್’ ಎಂಬ ಫ್ಯಾನ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಜಯ್ ಫಿಟ್‌ನೆಸ್ ಕಾಪಾಡಿಕೊಳ್ಳಲು ಸದಾ ಮನೆ ಊಟವನ್ನೇ ಹೆಚ್ಚು ಇಷ್ಟಪಡುತ್ತಾರೆ. ಸಿಎಂ ಆದ ಮೇಲೂ ಈ ಹವ್ಯಾಸ ಬದಲಾಗಿಲ್ಲ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಕಚೇರಿಯ ಹಿನ್ನೆಲೆ ಹಾಗೂ ಅಲ್ಲಿನ ನೈಸರ್ಗಿಕ ಅಂಶಗಳನ್ನು ಗಮನಿಸಿದರೆ ಇದು ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ಚಿತ್ರವಲ್ಲ, ಬದಲಿಗೆ ಅಪ್ಪಟ ನೈಜ ಫೋಟೋ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಫೋಟೋ ನೋಡಿದ ತಮಿಳುನಾಡಿನ ಜನತೆ ಹಾಗೂ ಅಭಿಮಾನಿಗಳು “ನಮ್ಮ ಸಿಎಂ ನಮ್ಮ ಆಸ್ತಿ” ಎಂದು ಹೆಮ್ಮೆಯಿಂದ ಕೊಂಡಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಭಾವುಕರಾಗಿ, “ಅಣ್ಣಾ.. ಒಂದಿನ ಊಟಕ್ಕೆ ನಮ್ಮನೆಗೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನ ನೀಡುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗದಂತೆ ರಾಜಕೀಯದಲ್ಲೂ ವಿಜಯ್ ತಮ್ಮದೇ ಆದ ಹೊಸ ಚಾಪು ಮೂಡಿಸುತ್ತಿದ್ದಾರೆ.

The post ʻನಮ್ಮ ಸಿಎಂ, ನಮ್ಮ ಆಸ್ತಿʼ: ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿಜಯ್ ಫೋಟೋ ವೈರಲ್ appeared first on Samyukta Karnataka.

ಮದ್ಯ ಖರೀದಿ-ಮಾರಾಟಕ್ಕೆ ವಯೋಮಿತಿ ನಿಗದಿ: ಮಹತ್ವದ ಆದೇಶ
ಚೆನ್ನೈ: ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವಾಲಯಗಳು, ಶಿಕ್ಷಣ ಸಂಸ್ಥೆ ಮತ್ತು ಬಸ್ ನಿಲ್ದಾಣಗಳ ಸಮೀಪದಲ್ಲಿದ್ದ ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿತ್ತು.

ಇನ್ನು ಮುಂದೆ ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಹೊಸ ಕ್ರಮವನ್ನು ಜಾರಿಗೊಳಿಸಿದೆ. ಅಂಗಡಿಗಳ ಸಿಬ್ಬಂದಿಗೆ ಗ್ರಾಹಕರ ವಯಸ್ಸನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮಾರಾಟ ಮತ್ತು ಖರೀದಿ ವೇಳೆ ಸಂಶಯವಿದ್ದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿ ಪರಿಶೀಲಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಆದೇಶ

The post ಮದ್ಯ ಖರೀದಿ-ಮಾರಾಟಕ್ಕೆ ವಯೋಮಿತಿ ನಿಗದಿ: ಮಹತ್ವದ ಆದೇಶ appeared first on Samyukta Karnataka.

ಬಹುಮತ ಸಾಬೀತಿಗೂ ಮೊದಲೇ ಸಂಚಲನ; ಸಿಎಂ ವಿಜಯ್ AIADMK ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದೇಕೆ?
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇತ್ತೀಚಿನ ಬೆಳವಣಿಗೆಯೊಂದು ಭಾರೀ ಅಚ್ಚರಿ ಮೂಡಿಸಿದೆ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಎಐಎಡಿಎಂಕೆ ಬಂಡಾಯ ನಾಯಕ ಸಿ.ವಿ. ಷಣ್ಮುಗಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಎಐಎಡಿಎಂಕೆ ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಮೂಡಿರುವ ಬೆನ್ನಲ್ಲೇ ಈ ಭೇಟಿ ನಡೆದಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರಕ್ಕೆ ಎಐಎಡಿಎಂಕೆಯ ಒಂದು ದೊಡ್ಡ ಬಣ ಬೆಂಬಲ ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಹಾಗೇ ಸಿ.ವಿ. ಷಣ್ಮುಗಂ ಮತ್ತು ಎಸ್‌ಪಿ ವೇಲುಮಣಿ ನೇತೃತ್ವದ ಬಂಡಾಯ ಬಣವು ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಇಪಿಎಸ್ ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಬದ್ಧವೈರಿ ಡಿಎಂಕೆ ಜೊತೆ ಕೈಜೋಡಿಸಲು ಸಂಚು ರೂಪಿಸಿದ್ದಾರೆ ಎಂದು ಈ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಏಪ್ರಿಲ್ 23ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 47 ಸ್ಥಾನಗಳನ್ನು ಗೆದ್ದು ಸೋಲನುಭವಿಸಿದ ನಂತರ, ಸುಮಾರು 30 ಶಾಸಕರು ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಷಣ್ಮುಗಂ ಹೇಳಿಕೆ: “ಪಕ್ಷದ ಮೂಲಭೂತ ತತ್ವಗಳನ್ನು ಗಾಳಿಗೆ ತೂರಿ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಪಳನಿಸ್ವಾಮಿ ಮುಂದಾಗಿದ್ದರು. ಆದ್ರೆ ನಾವು ಜಯಲಲಿತಾ ‘ಅಮ್ಮ ಆಳ್ವಿಕೆ’ಯನ್ನು ಮರಳಿ ತರಲು ಬಯಸುತ್ತೇವೆ. ಅದಕ್ಕಾಗಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಿಎಂ ವಿಜಯ್‌ಗೆ ಬೆಂಬಲ ಸೂಚಿಸುವ ಪತ್ರವನ್ನೂ ಹಸ್ತಾಂತರಿಸಿದ್ದಾರೆ.

ಅಲ್ಲದೇ.. ಇತ್ತ ಎಐಎಡಿಎಂಕೆ ಕೇಂದ್ರ ಕಚೇರಿಯು ಈ ಎಲ್ಲಾ ಆರೋಪಗಳನ್ನು “ವದಂತಿಗಳು” ಎಂದು ತಳ್ಳಿಹಾಕಿದೆ. ಬಂಡಾಯ ನಾಯಕರು ತಮ್ಮ ಜಿಲ್ಲೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ವಿಫಲರಾಗಿ ಈಗ ಸಚಿವ ಸ್ಥಾನದ ಆಸೆಗಾಗಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಎಕ್ಸ್ (X) ಮೂಲಕ ಕುಟುಕಿದೆ. ಮೈತ್ರಿ ನಿರ್ಧಾರಗಳನ್ನು ಕೆಲವು ಶಾಸಕರು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಪಕ್ಷದ ಕಾರ್ಯಕರ್ತರು ಇಪಿಎಸ್ ಪರವಾಗಿದ್ದಾರೆ ಎಂದು ಪಕ್ಷ ಪ್ರತಿಪಾದಿಸಿದೆ.

ಒಟ್ಟಾರೆಯಾಗಿ.. ಈ ಬೆಳವಣಿಗೆಯು ತಮಿಳುನಾಡಿನಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿದೆ.

The post ಬಹುಮತ ಸಾಬೀತಿಗೂ ಮೊದಲೇ ಸಂಚಲನ; ಸಿಎಂ ವಿಜಯ್ AIADMK ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದೇಕೆ? appeared first on Samyukta Karnataka.

ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಆಗಿ ಪ್ರಭಾಕರ್‌ ಆಯ್ಕೆ
ಚೆನ್ನೈ: ತಮಿಳುನಾಡು ವಿಧಾನಸಭೆ ಸ್ಪೀಕರ್ ಆಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಶಾಸಕ ಜೆಸಿಡಿ ಪ್ರಭಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಪ್ರಭಾಕರ್ ಅವರ ಹೆಸರನ್ನು ಪ್ರಸ್ತಾಪಿಸಿದರು ಮತ್ತು ಈ ಹುದ್ದೆಗೆ ಅವರದ್ದು ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಎಂ. ವಿ. ಕರುಪ್ಪಯ್ಯ ಘೋಷಿಸಿದರು.

ಬಳಿಕ ಉಪ ಸ್ಪೀಕರ್‌ ಸ್ಥಾನಕ್ಕೆ ತುರೈಯೂರ್‌ನ ಟಿವಿಕೆ ಶಾಸಕ ಎಂ. ರವಿಶಂಕರ್ ಅವಿರೋಧವಾಗಿ ಆಯ್ಕೆಯಾದರು. ಡೆಪ್ಯೂಟಿ ಸ್ಪೀಕ‌ರ್ ಸ್ಥಾನಕ್ಕೆ ರವಿಶಂಕರ್ ಹೊರತುಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸ್ಪೀಕರ್​ ಘೋಷಿಸಿದರು.

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಾತನಾಡಿ, ಅವಿರೋಧವಾಗಿ ಆಯ್ಕೆಯಾದ ನೂತನ ಸ್ಪೀಕರ್ ಪ್ರಭಾಕರ್ ಮತ್ತು ಡೆಪ್ಯೂಟಿ ಸ್ಪೀಕರ್ ರವಿಶಂಕರ್ ಅವರು ಅಭಿನಂದಿಸಿ, ಸದನವನ್ನು ಸುಗಮವಾಗಿ ನಡೆಸಿಕೊಡುವಂತೆ ಅವರಿಗೆ ಶುಭ ಹಾರೈಸಿದರು.

NEET 2026 Cancelled: ಮರುಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನ

The post ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಆಗಿ ಪ್ರಭಾಕರ್‌ ಆಯ್ಕೆ appeared first on Samyukta Karnataka.