Home ಕ್ರೀಡೆ ನಟ ಕಿಚ್ಚನ ಕಾರುಬಾರು

ನಟ ಕಿಚ್ಚನ ಕಾರುಬಾರು

ಬೆಂಗಳೂರು: ನಟ ಕಿಚ್ಚ ಸುದೀಪ್ ಈಗ ಕಾರ್ ರೇಸ್ ತಂಡಕ್ಕೆ ಮಾಲೀಕರಾಗಿದ್ದಾರೆ.
ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ಸೆಳೆದಿರುವ ಅವರು ಹಲವು ವರ್ಷಗಳಿಂದ ಸಿಸಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ನಟ ಸುದೀಪ್‌ ಅವರ ಆಟಕ್ಕೂ ಅಪಾರ ಅಭಿಮಾನಿಗಳಿರುವ ಅವರು ಕಾರ್‌ ರೇಸಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇಂಡಿಯನ್‌ ರೇಸಿಂಗ್‌ ಫೆಸ್ಟಿವಲ್‌ ನಡೆಯಲಿದ್ದು, ಇದರಲ್ಲಿ ನಟ ಕಿಚ್ಚ ಸುದೀಪ್‌ ಅವರು ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ, ತಮ್ಮ ತಂಡಕ್ಕೆ “ಕಿಚ್ಚಾಸ್‌ ಕಿಂಗ್ಸ್‌ ಬೆಂಗಳೂರು” (ಕೆಕೆಬಿ) ಎಂದು ಹೆಸರಿಸಿದ್ದಾರೆ, ಇಂಡಿಯನ್ ರೇಸಿಂಗ್ ಫೆಸ್ಟಿವಲ್-2025 ಬರುವ ಆಗಸ್ಟ್‌ನಲ್ಲಿ ವಿಶ್ವ ದರ್ಜೆಯ ಟ್ರ್ಯಾಕ್‌ಗಳು ಮತ್ತು ರೋಮಾಂಚಕ ಸರ್ಕ್ಯೂಟ್‌ಗಳಲ್ಲಿ ಐದು ಸುತ್ತಿನ ಆಕ್ಷನ್‌ಗಳೊಂದಿಗೆ ನಡೆಯಲಿದೆ, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ನಗರಗಳ ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತವೆ.

Exit mobile version