Home ಕ್ರೀಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ

0

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025–27 (WTC) ಅಂಕಪಟ್ಟಿ ಹೊಸದಾಗಿ ಪ್ರಕಟವಾಗಿದ್ದು, ಭಾರತ ತಂಡವು ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ನಿನ್ನೆ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ನಾಯಕ ಶುಭಮನ್ ಗಿಲ್, ಆಲ್‌ ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರುಗಳ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಅವರು ತಲಾ ಶತಕ ಗಳಿಸಿ ಭಾರತವನ್ನು ಸುರಕ್ಷಿತ ಸ್ಥಿತಿಗೆ ಕೊಂಡೊಯ್ದರು. ಪಂದ್ಯ ಡ್ರಾ ಆದ ಪರಿಣಾಮ, ಭಾರತ 4 ಪಂದ್ಯಗಳಿಂದ 16 ಅಂಕಗಳನ್ನು ಪಡೆದಿದ್ದು, WTC ಅಂಕಪಟ್ಟಿಯಲ್ಲಿ ಪೂರ್ತಿ ಶೇಕಡಾ 33.33 (PCT) ಪಾಯಿಂಟ್‌ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ, ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು WTC ರೇಸ್‌ನಲ್ಲಿ ತಮ್ಮ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ನಿರ್ಣಾಯಕ ಗೆಲುವಿನ ಮೇಲೆ ಕಣ್ಣಿಟ್ಟಿವೆ.

ಭಾರತವು ಪ್ರಸ್ತುತ WTC ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ, 4 ಪಂದ್ಯಗಳಿಂದ 16 ಅಂಕಗಳು ಮತ್ತು 33.33 PCT ಹೊಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟೆಸ್ಟ್‌ಗಳಲ್ಲಿ ಮೂರು ಗೆಲುವುಗಳುನ್ನು ಸಾಧಿಸಿ 100% PCT(Percentage of Points)ನೊಂದಿಗೆ ಅಗ್ರಸ್ಥಾನದಲ್ಲಿ ಉಳಿದಿದೆ. ಆದರೆ ಶ್ರೀಲಂಕಾ 66.67 PCT ಯೊಂದಿಗೆ 2 ನೇ ಸ್ಥಾನದಲ್ಲಿದೆ. ಅಗ್ರ ಎರಡು ತಂಡಗಳು 2027 ರಲ್ಲಿ ಈ ಚಕ್ರದ WTC ಫೈನಲ್‌ಗೆ ಅರ್ಹತೆ ಪಡೆಯುತ್ತವೆ

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯು ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಹಿಡಿತ ಸಾಧಿಸಲು ಪ್ರಮುಖ ಅವಕಾಶಗಳಾಗಿದ್ದು. 2027 ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯು ನಿರ್ಣಾಯಕ ಮುಖಾಮುಖಿಯಾಗಲಿದೆ.

WTC ಪಾಯಿಂಟ್ ಟೇಬಲ್‌ನಲ್ಲಿ: 1ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (100% PCT), 2ನೇ ಸ್ಥಾನದಲ್ಲಿ ಶ್ರೀಲಂಕಾ (66.67% PCT), 3ನೇ ಸ್ಥಾನದಲ್ಲಿ ಇಂಗ್ಲೆಂಡ್ (54.17% PCT) 4ನೇ ಸ್ಥಾನದಲ್ಲಿ ಭಾರತ (33.33% PCT)

ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ (5ನೇ ಪಂದ್ಯ) ಮತ್ತು ಮುಂದೆ ನಡೆಯಲಿರುವ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳು ಟೀಮ್ ಇಂಡಿಯಾದ ಡಬ್ಲ್ಯೂಟಿಸಿ ಫೈನಲ್ ಕನಸಿಗೆ ಅತ್ಯಂತ ಪ್ರಮುಖವಾಗಿವೆ. 2027ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಐದು ಟೆಸ್ಟ್ ಪಂದ್ಯಗಳ ಸರಣಿಯೂ ನಿರ್ಣಾಯಕವಾಗಲಿದೆ. ಭಾರತ ಉಳಿದ ಐದು ಪಂದ್ಯಗಳನ್ನು ಗೆದ್ದರೆ, ಒಟ್ಟು 76 ಅಂಕಗಳನ್ನು ಪಡೆದು 70.37% ಪಾಯಿಂಟ್ ಶೇಕಡಾವಾರು (PCT) ಗಳಿಸಬಹುದು – ಇದು ಫೈನಲ್‌ಗೆ ಪ್ರವೇಶಿಸುವ ಅಗ್ರ ಎರಡು ಸ್ಥಾನಗಳ ಭದ್ರಪಡಿಸಬಹುದು.

NO COMMENTS

LEAVE A REPLY

Please enter your comment!
Please enter your name here

Exit mobile version