ನವದೆಹಲಿ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹಂಗಾಮಿಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡವು ತಮ್ಮ ತರಬೇತುದಾರರ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮತ್ತು ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟರ್‌ಗಳಲ್ಲಿ ಒಬ್ಬರಾದ ಕುಮಾರ ಸಂಗಕ್ಕಾರ ಅವರನ್ನು ತಂಡದ ಮುಖ್ಯ ತರಬೇತುದಾರ (Head Coach)ರಾಗಿ ಮರುನೇಮಕ ಮಾಡಲಾಗಿದೆ.
2021–2024ರ ಅವಧಿಯಲ್ಲಿ ಯಶಸ್ವಿ ಸೇವೆ: ಸಂಗಕ್ಕಾರ ಅವರು 2021 ರಿಂದ 2024 ರವರೆಗೆ ರಾಜಸ್ಥಾನ ರಾಯಲ್ಸ್ ತಂಡದ Director of Cricket & Head Coach ಆಗಿ ಸೇವೆ ಸಲ್ಲಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಈಗ ಮತ್ತೆ 2026ರ ಹಂಗಾಮಿಗೆ ಮುನ್ನ ತಂಡದ ಮುಖ್ಯಸ್ಥರಾಗಿ ವಾಪಸಾಗಿದ್ದಾರೆ.
ರಾಹುಲ್ ದ್ರಾವಿಡ್ ಸ್ಥಾನ ತೊರೆದ ಹಿನ್ನೆಲೆ: 2025ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ತಂಡದ ಮುಖ್ಯ ತರಬೇತುದಾರರಾಗಿದ್ದರು. ಆದರೆ, ತಂಡ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 9ನೇ ಸ್ಥಾನದಲ್ಲಿ ಟೂರ್ನಿ ಮುಗಿಸಿದ ಹಿನ್ನೆಲೆ, ಅವರು ಆಗಸ್ಟ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯಿಂದ ದೂರ ಉಳಿದರು.
ರಾಜಸ್ಥಾನದ ಬೃಹತ್ ಬದಲಾವಣೆಗಳು: ತಂಡದ ಫಲಿತಾಂಶ ತೃಪ್ತಿದಾಯಕವಾಗಿರದ ಕಾರಣ ಈ ಬಾರಿ ಹಲವು ತಿದ್ದಾಟ-ತಿದ್ದುಪಡಿಗಳನ್ನು ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಸಂಜು ಸ್ಯಾಮ್ಸನ್ ಅವರನ್ನು CSKಗೆ ಬಿಟ್ಟು ಕೊಟ್ಟಿರುವುದು. ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಪಡೆದಿರುವುದು. 3 ವಿದೇಶಿಗರನ್ನು ಸೇರಿ ಒಟ್ಟು 7 ಆಟಗಾರರನ್ನು ಬಿಡುಗಡೆ ಫ್ರಾಂಚೈಸಿ ಮಾಡಿದೆ. ಮುಂದಿನ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ.
ರಾಜಸ್ಥಾನ ರಾಯಲ್ಸ್ ಪ್ರಕಟಣೆ: ರಾಜಸ್ಥಾನ ರಾಯಲ್ಸ್ ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ “Director of Cricket ಆಗಿರುವ ಕುಮಾರ ಸಂಗಕ್ಕಾರ ಅವರು IPL 2026ರಲ್ಲಿ Head Coach ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.” ಎಂದು ಮಾಹಿತಿ ನೀಡಿದೆ.
2026ರ ಹಂಗಾಮಿನಲ್ಲಿ ಬಲಿಷ್ಠ ತಂಡದೊಂದಿಗೆ ಪುನರಾಗಮನಕ್ಕಾಗಿ ಸಜ್ಜಾಗಿದೆ. ಸಂಗಕ್ಕಾರ ನೇಮಕಾತಿಯೊಂದಿಗೆ ಫ್ರಾಂಚೈಸಿಗೆ ಹೊಸ ಶಕ್ತಿ ಸೇರ್ಪಡೆಯಾಗಿದೆ ಎಂದು ಅಭಿಮಾನಿಗಳು ನಂಬಿದ್ದಾರೆ.
