ಮುಂಬೈ: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ ಆರಂಭವಾಗುವ ಮೊದಲು ಭಾರೀ ಚರ್ಚೆಗೆ ಕಾರಣವಾಗಿದ್ದ ಪ್ರಮುಖ ಆಟಗಾರರ ಟ್ರೇಡಿಂಗ್ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಈ ಬಾರಿ ನಡೆದ ಆಟಗಾರರ ವಿನಿಮಯವು ಐಪಿಎಲ್ ಇತಿಹಾಸದಲ್ಲೇ ದೊಡ್ಡದಾಗಿದೆ ಎನ್ನುವಂತಾಗಿದೆ.
ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ: ರಾಜಸ್ಥಾನ್ ರಾಯಲ್ಸ್‌ಗೆ ಕಳೆದ 11 ಋತುಗಳಿಂದ ಸೇವೆ ಸಲ್ಲಿಸಿದ್ದ ಮತ್ತು 4000ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದ ಸಂಜು ಸ್ಯಾಮ್ಸನ್, 18 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ್ದಾರೆ. ವಿಕೆಟ್‌ಕೀಪರ್–ಬ್ಯಾಟರ್ ಹಾಗು ಭವಿಷ್ಯದ ನಾಯಕತ್ವ ಎರಡನ್ನೂ ತುಂಬಲಿರುವ ಪ್ರಮುಖ ಆಟಗಾರನಾಗಿ ಸ್ಯಾಮ್ಸನ್‌ನ್ನು CSK ವತಿಯಿಂದ ಆಯ್ಕೆ ಮಾಡಲಾಗಿದೆ. ಧೋನಿ ಮುಂದಿನ ವರ್ಷ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯ ನಡುವೆ, ಸ್ಯಾಮ್ಸನ್ ತಂಡದ ನೂತನ ಮುಖವಾಗುತ್ತಾರೆ.
ರವೀಂದ್ರ ಜಡೇಜಾ ಮತ್ತೆ ರಾಜಸ್ಥಾನಕ್ಕೆ: 2012ರಲ್ಲಿ ಚೆನ್ನೈ ಸೇರಿ ದಶಕಕ್ಕಿಂತ ಹೆಚ್ಚು ಕಾಲ CSK ತಂಡದ ಮೂಲಸ್ತಂಭರಾಗಿದ್ದ ರವೀಂದ್ರ ಜಡೇಜಾ, 14 ಕೋಟಿಗೆ ರಾಜಸ್ಥಾನ್ ರಾಯಲ್ಸ್‌ಗೆ ಮರಳಿದ್ದಾರೆ. ಮೂರು ಐಪಿಎಲ್ ಪ್ರಶಸ್ತಿಗಳು, 143 ವಿಕೆಟ್‌ಗಳು ಮತ್ತು 2023ರ ಫೈನಲ್ ಗೆಲುವಿನ ಹೀರೋ ಆಗಿದ್ದ ಜಾಡು ಈ ಬಾರಿ ಹಳೆಯ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಸ್ಯಾಮ್ ಕರನ್ – ರಾಜಸ್ಥಾನಕ್ಕೆ 2.4 ಕೋಟಿಗೆ: ಚೆನ್ನೈ ಪರ ಆಡುತ್ತಿದ್ದ ಇಂಗ್ಲೆಂಡ್ ಆಲ್-ರೌಂಡರ್ ಸ್ಯಾಮ್ ಕರನ್, ಕಡಿಮೆ ಮೂಲ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಸೇರಿದ್ದಾರೆ. 64 ಐಪಿಎಲ್ ಪಂದ್ಯಗಳ ಅನುಭವ ಇರುವ ಕರನ್ RR ತಂಡಕ್ಕೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಬಲ ನೀಡಲಿದ್ದಾರೆ.
ಮೊಹಮ್ಮದ್ ಶಮಿ – ಭಾರತದ ಪ್ರಮುಖ ವೇಗಿ ಶಮಿ, ಸನ್‌ರೈಸರ್ಸ್ ಹೈದರಾಬಾದ್‌ನಿಂದ 10 ಕೋಟಿಗೆ ಲಕ್ಕೋ ತಂಡಕ್ಕೆ ಸೇರಿದ್ದಾರೆ. ಉತ್ತರ ಪ್ರದೇಶದ ಬೌಲರ್ ಈ ಬಾರಿ ತವರು ಅಂಗಳದಲ್ಲಿ ಆಡಲಿದ್ದಾರೆ. ಶಮಿ ಅವರು ತಮ್ಮ ಮೂಲ ಬೆಲೆ 10 ಕೋಟಿ ರೂ ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಲಕ್ಕೋ ಬಂದಿದ್ದಾರೆ. ಉತ್ತರ ಪ್ರದೇಶದ ತವರೂರು ಪಿಚ್‌ಗಳೊಂದಿಗೆ ಹೊಂದಾಣಿಕೆ ಇರುವ ಶಮಿ LSGಗೆ ಸೂಕ್ತ ಪಾಲಾಗಿದೆ ಎನ್ನಲಾಗಿದೆ.
ನೀತಿಶ್ ರಾಣಾ – ರಾಜಸ್ಥಾನದಿಂದ ಡೆಹ್ಲಿಗೆ: ಯಾವುದೇ ಅಂದಾಜು ಇಲ್ಲದೆ ನಡೆದ ಅಚ್ಚರಿಯ ಟ್ರೇಡ್! ಎಡಗೈ ಬ್ಯಾಟರ್ ನೀತಿಶ್ ರಾಣಾ, 4.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ.
ಮಯಾಂಕ್ ಮಾರ್ಕಂಡೆ – ಮುಂಬೈಗೆ ಮರಳಿ: ಕೆಕೆಆರ್ ಪರ ಆಡುತ್ತಿದ್ದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ, 30 ಲಕ್ಷಕ್ಕೆ ಮತ್ತೆ ಮುಂಬೈ ಇಂಡಿಯನ್ಸ್ ಗೆ ಸೇರಿದ್ದಾರೆ.
ಅರ್ಜುನ್ ತೆಂಡೂಲ್ಕರ್ – ಮುಂಬೈಯಿಂದ LSGಗೆ: ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್, 30 ಲಕ್ಷಕ್ಕೆ ಲಕ್ಕೋ ಸೂಪರ್ ಜೈಂಟ್ಸ್ ತಂಡಕ್ಕೆ ವರ್ಗಾಯಿಸಲ್ಪಟ್ಟಿದ್ದಾರೆ. ಮುಂಬೈ ನೆರಳಿನಿಂದ ಹೊರಬಂದು ಹೊಸ ತಂಡದಲ್ಲಿ ಅವಕಾಶಗಳ ನಿರೀಕ್ಷೆಯಿದೆ.
ಡೊನೊವನ್ ಫೆರೇರಾ – ಡೆಹ್ಲಿಯಿಂದ ರಾಜಸ್ಥಾನಕ್ಕೆ: ಡೆಲ್ಲಿ ಕ್ಯಾಪಿಟಲ್ಸ್ ಪರ ಇದ್ದ ಫೆರೇರಾ, 1 ಕೋಟಿಗೆ ರಾಜಸ್ಥಾನಕ್ಕೆ ಸೇರಿದ್ದಾರೆ.
