Home ಕ್ರೀಡೆ ಏಷ್ಯಾಕಪ್‌ ಕ್ರಿಕೆಟ್‌: ಪಾಕ್‌ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಜಯ

ಏಷ್ಯಾಕಪ್‌ ಕ್ರಿಕೆಟ್‌: ಪಾಕ್‌ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಜಯ

0

ದುಬೈ: ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಏಷ್ಯಾಕಪ್‌ನಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ಪಾಕಿಸ್ತಾನ ನೀಡಿದ್ದ 128 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಭಾರತ 25 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಸಯ್ಯಿಮ್ ಅಯೂಬ್ ಶೂನ್ಯಕ್ಕೆ ಜಸ್‌ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದರಿಂದ ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಮರು ಓವರ್‌ನಲ್ಲೇ ವೇಗಿ ಜಸ್‌ಪ್ರೀತ್ ಬುಮ್ರಾ ದಾಳಿಗೆ ಮೊಹಮ್ಮದ್ ಹ್ಯಾರಿಸ್ 3 ರನ್‌ಗಳಿಸಿ ಹಾರ್ದಿಕ್‌ಗೆ ಕ್ಯಾಚ್ ನೀಡಿದರು. ಇದರಿಂದ ತಂಡದ ಮೊತ್ತ 10 ರನ್ ದಾಟುವಷ್ಟರಲ್ಲೇ ತನ್ನ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭಾರತದ ಸ್ಪಿನ್ ದಾಳಿಗೆ ಪಾಕಿಸ್ತಾನ ರನ್‌ಗಾಗಿ ಪರದಾಡಿದ್ದಲ್ಲದೇ, ಆಲೌಟ್‌ನಿಂದ ಬಚಾವ್ ಆಯಿತು. ಅಂತಿಮವಾಗಿ ಹೋರಾಡಿದ ಬಳಿಕ ಭಾರತಕ್ಕೆ 128 ರನ್‌ಗಳ ಗೆಲುವಿನ ಗುರಿಯನ್ನು ನೀಡಲಷ್ಟೇ ಪಾಕಿಸ್ತಾನಕ್ಕೆ ಸಾಧ್ಯವಾಯಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಸಹಿಬ್‌ಜಾದಾ ಫರ್ಹನ್ 40 ರನ್ ಹಾಗೂ ಬಾಲಂಗೋಚಿ ಶಾಹೀನ್ ಅಫ್ರಿದಿ ಅಜೇಯ 33 ರನ್‌ಗಳಿಸಿದ ಪರಿಣಾಮ ಪಾಕಿಸ್ತಾನ ನೂರರ ಗಡಿ ದಾಟಲು ಸಾಧ್ಯವಾಯಿತು.

ಸ್ಪಿನ್ ದಾಳಿಗೆ ಮಧ್ಯಮ ಕ್ರಮಾಂಕ ಕುಸಿತ: ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಟಗಾರ ಫರ್ಹನ್ ಹಾಗೂ ಫಕರ್ ಜಮಾನ್ ಕಾಪಾಡುವ ಯತ್ನ ಮಾಡಿ, ಮೊದಲ ಪವರ್ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಪವರ್‌ಪ್ಲೇ ಮುಗಿಯುತ್ತಿದ್ದಂತೆ ಭಾರತದ ಸ್ಪಿನ್ ಅಟ್ಯಾಕ್ ಆರಂಭವಾಯಿತು. ಅದರಲ್ಲೂ ಕುಲ್‌ದೀಪ್ ಯಾದವ್‌ರ ಸ್ಪಿನ್ ಕೈ ಚಳಕ ಪಾಕ್ ಬ್ಯಾಟರ್‌ಗಳನ್ನು ಬಹುವಾಗಿ ಕಾಡಲು ಆರಂಭಿಸಿತು.

17 ರನ್‌ಗಳಿಸಿದ್ದ ಫಕರ್ ಜಮಾನ್ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರೆ, ಮಧ್ಯಮ ಕ್ರಮಾಂಕದಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದ ನಾಯಕ ಸಲ್ಮಾನ್ ಅಘಾ 3 ರನ್‌ಗಳಿಸಿ ಅಕ್ಷರ್ ಪಟೇಲ್‌ಗೆ ಎರಡನೇ ಅವರಾಗಿ ವಿಕೆಟ್ ನೀಡಿದರು. ಇದಾದ ಬಳಿಕ ಕುಲ್‌ದೀಪ್ ಯಾದವ್ ಹಸನ್ ನವಾಜ್ ಅವರನ್ನು 6 ರನ್‌ಗಳಿಗೆ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಶೂನ್ಯಕ್ಕೆ ಎಲ್‌ಬಿ ಬಲೆಗೆ ಉರುಳಿಸಿದರು.

7ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಬೌಲಿಂಗ್ ಆರಂಭಿಸಿದರೆ, ಅಕ್ಷರ್ ಪಟೇಲ್ ಮುಂದಿನ ಓವರ್ ಎಸೆದು ಅಪಾಯಕಾರಿ ಫಖರ್ ಅವರನ್ನು ಲಾಂಗ್ ಆಫ್‌ನಲ್ಲಿ ಔಟ್ ಮಾಡಿದರು. ಅದಾಗಕೇ ಪಾಕಿಸ್ತಾನ ಈಗಾಗಲೇ 8 ಓವರ್‌ಗಳಲ್ಲಿ 45 ರನ್‌ಗಳಿಗೆ 3 ರನ್‌ಗಳ ನಷ್ಟದಲ್ಲಿತ್ತು. ಈ ಹಂತದಲ್ಲಿ, ಭಾರತದ ಸ್ಪಿನ್ ತ್ರಿವಳಿ ಇನ್ನೂ 9 ಓವರ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು.

ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿದ್ದವು. ಚೆಂಡು ಮೈದಾನದಲ್ಲಿ ಸ್ವಲ್ಪ ನಿಂತು ತಿರುಗುತ್ತಿತ್ತು. ಸೂರ್ಯಕುಮಾರ್ ಅಭಿಷೇಕ್ ಶರ್ಮಾಗೆ ಒಂದು ಓವರ್ ನೀಡಿದರು, ಶರ್ಮಾ ಕೂಡ ಕೇವಲ 5 ರನ್‌ಗಳನ್ನು ನೀಡಿದರು. ರನ್‌ಗಳು ಸಂಪೂರ್ಣವಾಗಿ ಪಾಕಿಸ್ತಾನದ ನಿರೀಕ್ಷೆಯಂತೆ ಮೂಡಿ ಬರುತ್ತಿರಲಿಲ್ಲ.

10ನೇ ಓವರ್‌ನಲ್ಲಿ, ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ಕ್ಯಾಚ್ ಪಡೆದರು. ಮತ್ತೊಮ್ಮೆ, ಅಕ್ಷರ್ ತಮ್ಮ ಮ್ಯಾಜಿಕ್ ಕೆಲಸ ಮಾಡಿದರು. ಮೊದಲ 6 ಓವರ್‌ಗಳಲ್ಲಿ, ಪಾಕಿಸ್ತಾನ 42/2 ಆಗಿತ್ತು. ಮುಂದಿನ ಆರು ಎಸೆತಗಳ ನಂತರ, ಸ್ಕೋರ್ 62/4 ಆಗಿತ್ತು. 3.33 ಕ್ಕೆ ಕೇವಲ 20 ರನ್‌ಗಳು ಮತ್ತು 2 ವಿಕೆಟ್‌ಗಳು ಬಿದ್ದವು. ಅಲ್ಲದೇ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಫರ್ಹನ್‌ರನ್ನೂ ಕೂಡ ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಫಹೀಮ್ ಅರ್ಶಫ್ 11 ರನ್‌ಗಳಿಸಿ ಸಮಾಧಾನ ಪಟ್ಟರು.

ಸ್ಲಾಗ್ ಓವರ್‌ಗಳಲ್ಲಿ ಅಫ್ರಿದಿ ಮಿಂಚು: ಪಾಕಿಸ್ತಾನ 127 ರನ್‌ಗಳನ್ನು ಗಳಿಸಲು ಪ್ರಮುಖ ಕಾರಣವೇ ಬಾಲಂಗೋಚಿ ಶಾಹೀನ್ ಅಫ್ರಿದಿ. ಸ್ಲಾಗ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ಅಫ್ರಿದಿ ಕೇವಲ 16 ಎಸೆತಗಳಲ್ಲೇ ಅಜೇಯ 33 ರನ್ ಗಳಿಸಿದರು. ಅಲ್ಲದೇ, 20ನೇ ಓವರ್‌ನಲ್ಲಿ ಸತತವಾಗಿ ಹಾರ್ದಿಕ್ ಪಾಂಡ್ಯ ಅವರಿಗೆ 2 ಸಿಕ್ಸರ್ ಬಾರಿಸಿದರು. ಇದರಿಂದ ಪಾಕಿಸ್ತಾನ 120ರ ಗಡಿ ದಾಟಿತು.

ಭಾರತ ದಿಟ್ಟ ಉತ್ತರ: ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾದರೂ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಸೂರ್ಯಕುಮಾರ್ ಹಾಗೂ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಪವರ್‌ಪ್ಲೇನಲ್ಲೇ 60 ರನ್‌ಗೆ ತಂಡದ ಮೊತ್ತ ಹೆಚ್ಚಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version