Home ಸುದ್ದಿ ರಾಜ್ಯ ಕೋಲ್ಕತ್ತಾದ ಅತ್ಯಾಚಾರ ಕೇಸ್‌ಗೆ ಕರ್ನಾಟಕ ನಂಟು, ಮುಧೋಳ ವಿದ್ಯಾರ್ಥಿ ಪ್ರಮುಖ ಆರೋಪಿ!

ಕೋಲ್ಕತ್ತಾದ ಅತ್ಯಾಚಾರ ಕೇಸ್‌ಗೆ ಕರ್ನಾಟಕ ನಂಟು, ಮುಧೋಳ ವಿದ್ಯಾರ್ಥಿ ಪ್ರಮುಖ ಆರೋಪಿ!

0

ಬಾಗಲಕೋಟೆ: ಕೋಲ್ಕತ್ತಾ ಐಐಎಂನಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಕರಣ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ 7 ದಿನಗಳ ಪೊಲೀಸ್ ವಶದಲ್ಲಿದ್ದಾನೆ.

ಬಂಧಿತ ಆರೋಪಿಯನ್ನು ಪರಮಾನಂದ ಮಹಾವೀರ ಟೋಪನ್ನವರ (26) ಎಂದು ಗುರುತಿಸಲಾಗಿದೆ. ಈತ ಕೋಲ್ಕತ್ತಾ ಐಐಎಂನಲ್ಲಿ ದ್ವಿತೀಯ ವರ್ಷ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಜೋಕಾ ಕ್ಯಾಂಪಸ್‌ನ ಹಾಸ್ಟೆಲ್ ರೂಂನಲ್ಲಿ ಸಂತ್ರಸ್ತ ಮನಶಾಸ್ತ್ರಜ್ಞೆಗೆ ನಿದ್ರೆ ಮಾತ್ರೆ ಬರೆಸಿದ ತಂಪುಪಾನೀಯವನ್ನು ನೀಡಿ ಅತ್ಯಾಚಾರ ಎಸೆಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣ ಕೋಲ್ಕತ್ತಾದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಕೋಲ್ಕತ್ತಾದ ಹರಿದೇವಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಜೋಕಾ ಕ್ಯಾಂಪಸ್‌ನಲ್ಲಿ ಘಟನೆ ನಡೆದಿರುವ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಪರಮಾನಂದನನ್ನು ಭಾರತೀಯ ನ್ಯಾಯ ಸಂಹಿತಾ 2023ರ ಸೆಕ್ಷನ್ 123 ಮತ್ತು ಸೆಕ್ಷನ್ 64ರ ಅಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ದೂರಿನ ಪ್ರಕಾರ ಜು.ಲಯ 12ರಂದು ಘಟನೆ ನಡೆದಿದೆ.

ಜುಲೈ 12ರಂದು ಪುರುಷರ ಹಾಸ್ಟೆಲ್‌ಗೆ ಸಂತ್ರಸ್ತೆಯನ್ನು ಕರೆಯಿಸಿಕೊಂಡು ಅತ್ಯಾಚಾರ ನಡೆಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 9 ಸಿಬ್ಬಂದಿಗಳಿರುವ ಎಸ್‌ಐಟಿಯನ್ನು ರಚಿಸಿ ತನಿಖೆಯ ಹೊಣೆ ನೀಡಿದ್ದಾರೆ.

ಪ್ರಕರಣದಲ್ಲಿ ಹಲವು ಗೊಂದಲಗಳಿರುವ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದವರಿದಿದೆ. ನ್ಯಾಯಾಲಯವು ಜುಲೈ 19ರ ತನಕ ಪರಮಾನಂದನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿ ಪರಮಾನಂದ ಬಂಧನವನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಖಚಿತಪಡಿಸಿದ್ದಾರೆ. ಆರೋಪಿಯ ಪೋಷಕರು ಘಟನೆ ತಿಳಿಯುತ್ತಿದ್ದಂತೆ ಕೋಲ್ಕತ್ತಾಗೆ ಧಾವಿಸಿದ್ದು, ವಿಷಯ ತಿಳಿದು ವಿಚಲಿತರಾಗಿದ್ದಾರೆ.

ಸಂತ್ರಸ್ತೆ ಆರೋಪ ಏನು..?: ಸಂತ್ರಸ್ತ ಮನಶಾಸ್ತ್ರಜ್ಞೆ ಆರೋಪಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಆಗಿದ್ದಾಳೆ. ಅಲ್ಲಿಂದ ಸ್ನೇಹ ಬೆಳೆದಿದ್ದು, ಕೌನ್ಸಲಿಂಗ್ ನೆಪದಲ್ಲಿ ಆಕೆಯನ್ನು ಹಾಸ್ಟೆಲ್‌ಗೆ ಕರೆಯಿಸಿಕೊಂಡು ಪಿಜ್ಜಾ ಹಾಗೂ ತಂಪು ಪಾನೀಯ ನೀಡಿದ್ದಾನೆ. ಅದರ ಸೇವನೆ ನಂತರ ವಿದ್ಯಾರ್ಥಿನಿಗೆ ಎಚ್ಚರ ತಪ್ಪಿದೆ. ಎಚ್ಚರವಾದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

NO COMMENTS

LEAVE A REPLY

Please enter your comment!
Please enter your name here

Exit mobile version