Home ಸಿನಿ ಮಿಲ್ಸ್ SU From SO: ಗೆದ್ದ ಸು ಫ್ರಮ್ ಸೋ, ರಿಷಬ್ ಶೆಟ್ಟಿ ಪ್ರೀತಿಯ ಸಂದೇಶ

SU From SO: ಗೆದ್ದ ಸು ಫ್ರಮ್ ಸೋ, ರಿಷಬ್ ಶೆಟ್ಟಿ ಪ್ರೀತಿಯ ಸಂದೇಶ

0

ವಿಭಿನ್ನ ಶೀರ್ಷಿಕೆಯ ಮೂಲಕವೇ ತೆರೆ ಮೇಲೆ ಬಂದ ಕನ್ನಡ ಸಿನಿಮಾ ‘ಸು ಫ್ರಮ್ ಸೋ’ ಗೆದ್ದಿದೆ. ಚಿತ್ರದ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಚಿತ್ರ ನೋಡಲು ಬಯಸಿದವರಿಗೆ ಟಿಕೆಟ್ ಸಹ ಸಿಗುತ್ತಿಲ್ಲ.

ಜನರು, ಸಾಮಾಜಿಕ ಜಾಲತಾಣದ ಮೂಲಕವೇ ಭರ್ಜರಿ ಪ್ರಚಾರವನ್ನು ಪಡೆದ ‘ಸು ಫ್ರಮ್ ಸೋ’ ಚಿತ್ರ ಯಶಸ್ವಿಯಾಗಿದೆ. ನಿರ್ದೇಶಕ ಯೋಗರಾಜ್ ಭಟ್, ರಿಷಬ್ ಶೆಟ್ಟಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಜುಲೈ 25ರಂದು ‘ಸು ಫ್ರಮ್ ಸೋ’ (ಸುಲೋಚನಾ ಫ್ರಮ್ ಸೋಮೇಶ್ವರ) ಚಿತ್ರ ತೆರೆ ಕಂಡಿತ್ತು. ಹಾಸ್ಯದೊಂದಿಗೆ ತುಸು ಹಾರಾರ್ ಮಿಶ್ರಣಗೊಂಡಿರುವ ಚಿತ್ರ ಜನರ ಮನೆ, ಮನ ತಲುಪಿದೆ.

ರಿಷಬ್ ಶೆಟ್ಟಿ ಸಂದೇಶ: ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ‘ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ ‘ಸು ಫ್ರಮ್ ಸೋ’ ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃತ್ತೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ’ ಎಂದು ಹೇಳಿದ್ದಾರೆ.

‘ಚಿತ್ರ ರಚಿಸಿ ನಿರ್ದೇಶನ ಮಾಡಿದ ಜೆ.ಪಿ. ತುಮಿನಾಡ ಅವರಿಗೆ ಚಿತ್ರರಂಗಕ್ಕೆ ಸ್ವಾಗತ!. ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ. ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಗಳು ಹೊರಬರುತ್ತಿವೆ’ ಎಂದು ತಿಳಿಸಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್, ‘ನಮಸ್ತೆ ಸು ಫ್ರಂ ಸೋ’ ಸರಳ ರಂಜನೆಯ ಹೊಸ ರಾಜ ಬೀದಿ. ಒಂದು ಪರಮಾದ್ಭುತ ಸರಳ ಚಿತ್ರ’ ಎಂದು ಕನ್ನಡದಲ್ಲಿ ಶುಭ ಸಂದೇಶ ಬರೆದಿದ್ದಾರೆ.

‘ಗೆಳೆಯ ರಾಜ್ ಇರುವ ಕಡೆ ನೆಟ್ಟಗಿರುವುದೇನೋ ಒಂದು ಇರಲೇಬೇಕು. ಈ ಗೆಲುವು ಈ ಸಂಭ್ರಮ ಕನ್ನಡಕ್ಕೆ ಬರಬೇಕಿತ್ತು. ಶೆಟ್ರು ಗ್ಯಾಂಗ್‌ಗೆ ಇಡೀ ಚಿತ್ರತಂಡಕ್ಕೆ ನಮನ’ ಎಂದು ಭಟ್ಟರು ಶುಭ ಹಾರೈಸಿದ್ದಾರೆ.

‘ಇಷ್ಟು ಖುಷಿ ಅಲೆ ಎಬ್ಬಿಸಿದ್ದಕ್ಕೆ ಉದ್ಯಮದವನಾಗಿ, ಪ್ರೇಕ್ಷಕನಾಗಿ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಭಟ್ಟರು ಪೋಸ್ಟ್ ಹಾಕಿದ್ದಾರೆ.

‘ಸು ಫ್ರಮ್ ಸೋ’ಚಿತ್ರದ ನಿರ್ದೇಶಕರು ಜಿ.ಪಿ.ತೂಮಿನಾಡು. ರಾಜ್ ಬಿ.ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ ನಿರ್ಮಾಪಕರು.

ಚಿತ್ರದಲ್ಲಿ ಜಿ.ಪಿ.ತೂಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ.ತೂಮಿನಾಡು. ದೀಪಕ್ ರೈ ಪಾಣಾಜೆ, ರಾಜ್ ಬಿ.ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ರಂಗಭೂಮಿಯಲ್ಲಿ ಪಳಗಿರುವ ಜಿ.ಪಿ.ತೂಮಿನಾಡು ತುಳು ನಾಟಕದ ಮಾದರಿಯನ್ನು ಬೆಳ್ಳಿ ಪರದೆಗೆ ತಂದಿದ್ದಾರೆ. ಒಂದು ವಠಾರದಲ್ಲಿ ನಡೆಯುವ ಕಥೆಯೇ ಸಂಪೂರ್ಣ ಚಿತ್ರವಾಗಿದೆ.

ಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಸಂಪೂರ್ಣ ಹಾಸ್ಯಭರಿತ ಕನ್ನಡ ಚಿತ್ರವನ್ನು ಬಹಳ ದಿನಗಳ ಬಳಿಕ ವೀಕ್ಷಣೆ ಮಾಡಿದ ಜನರು ಚಿತ್ರ ಮೆಚ್ಚಿದ್ದಾರೆ. ವಿಮರ್ಶೆಗಳು ಉತ್ತಮವಾಗಿವೆ. ಚಿತ್ರೋದ್ಯಮದ ಹಲವಾರು ಗಣ್ಯರು ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡು, ತಂಡವನ್ನು ಅಭಿನಂದಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version