Home News RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಕಾರಣ

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಕಾರಣ

ಮಂಗಳೂರು: ಆರ್ ಸಿ ಬಿ ತಂಡದ ವಿಜಯೋತ್ಸವದ ಸಂದರ್ಭ ಕಾಲ್ತುಳಿತ ಪ್ರಕರಣ ಜೀವ ಹಾನಿಗೆ ಸರಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಕಾರಣವಾಗಿದೆ ಎಂದು ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಬಯಸುತ್ತೇನೆ. ಗಾಯಾಳುಗಳು ಬೇಗನೇ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡುತ್ತೇನೆ. 18 ವರ್ಷಗಳ ಬಳಿಕ ಟ್ರೋಫಿ ಗಳಿಸಿರುವ ತಂಡದ ವೀಕ್ಷಣೆಗೆ ಲಕ್ಷಾಂತರ ಜನ ಮುಗಿಬೀಳಬಹುದು ಎಂಬ ಮುಂದಾಲೋಚನೆ ಸರಕಾರಕ್ಕೆ ಇರಬೇಕಿತ್ತು. ಕ್ರಿಕೆಟ್ ಆಟಗಾರರ ಚಲಿಸುವ ಮಾರ್ಗದ ಉದ್ದಕ್ಕೂ ಕ್ರೀಡಾಂಗಣದ ಸುತ್ತಮುತ್ತ ಬ್ಯಾರಿಗೇಡ್ ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇದೆಲ್ಲವನ್ನು ಬಿಟ್ಟು ವಿಧಾನಸೌಧದ ಮುಂಭಾಗ ಸರಕಾರ ಆಟಗಾರರನ್ನ ಗೌರವಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಸುರಕ್ಷತಾ ಕ್ರಮಕ್ಕೆ ಗಮನ ನೀಡದೆ ಈ ಘಟನೆ ಸಂಭವಿಸಿದೆ. ಸರಕಾರ ವೈಫಲ್ಯದ ಜವಾಬ್ದಾರಿಯನ್ನ ಕೂತುಕೊಳ್ಳಬೇಕು ಎಂದು ಹೇಳಿದ್ದಾರೆ.ಸರಕಾರ ಹಾಗೂ ಆರ್ ಸಿಬಿ ,ಬಿಸಿಸಿಐ ಜತೆ ಸೇರಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version