Home ಸಿನಿ ಮಿಲ್ಸ್ ಉಪವಾಸ ಆರಂಭಿಸಿದ ನಟ ಪ್ರಥಮ್, ಬೇಡಿಕೆಗಳು

ಉಪವಾಸ ಆರಂಭಿಸಿದ ನಟ ಪ್ರಥಮ್, ಬೇಡಿಕೆಗಳು

0

ಬೆಂಗಳೂರು: “ನಟ ದರ್ಶನ್ ಬಂದು ಹೇಳಿಕೆ ಕೊಡುವ ತನಕ ನಾನು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ” ಎಂದು ನಟ ಪ್ರಥಮ್‌ ಹೇಳಿದ್ದಾರೆ. ಪ್ರಥಮ್ ದರ್ಶನ್ ಅಭಿಮಾನಿಗಳ ಜೊತೆ ಕಾನೂನು ಹೋರಾಟ ಆರಂಭಿಸಿದ್ದಾರೆ.

ಮಂಗಳವಾರ ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿ ಅವರು ದೂರು ನೀಡಿದ್ದಾರೆ. ಬಳಿಕ ಮಾತನಾಡಿ, “ಇದು ನನ್ನ ಜೀವನದ ಬಹಳ ದೊಡ್ಡ ನಿರ್ಧಾರ ಮಾಧ್ಯಮದವರ ಸಹಕಾರ ಕೋರುತ್ತೇನೆ” ಎಂದರು.

ಕಳೆದ 5 ದಿನಗಳ ಹಿಂದೆ ಏಕೆ ದೂರು ನೀಡಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ನೀಡಿ, “ಬೇರೆ ಯಾರೇ ಆಗಿದ್ದರೂ ಅಂದೇ ದೂರು ಕೊಡುತ್ತಿದ್ದೆ. ಆದರೆ ಇದು ಅಂಧಾಭಿಮಾನಿಗಳ ವಿಷಯ ಆಗಿದ್ದರಿಂದ ದೂರು ನೀಡುವ ಅನಿವಾರ್ಯತೆ ಇಂದು ಆಯಿತು” ಎಂದು ಹೇಳಿದರು.

“ಈಗಾಗಲೇ ನಟಿ ರಮ್ಯಾ ದೂರು ನೀಡಿದ್ದಾರೆ. ನಮ್ಮ ವೈಯಕ್ತಿಕ ಜೀವನಕ್ಕೂ ಧಕ್ಕೆ ಆಗಿದ್ದು, ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು ಚಿತ್ರರಂಗದ ಒಳಿತಿಗಾಗಿ, ಟ್ರೋಲ್ ವಿರುದ್ಧ ಹೋರಾಡಲು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ” ಎಂದು ತಿಳಿಸಿದರು.

ಉಪವಾಸ ಆರಂಭಿಸಿದ ಪ್ರಥಮ್: “ಇಂದಿನಿಂದ ನಾನು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ಒಂದು ಹನಿ ನೀರು ಕೂಡ ಕುಡಿಯುತ್ತಿಲ್ಲ. ದರ್ಶನ್ ಸರ್ ಬಂದು ಇಲ್ಲಿ ಹೇಳಿಕೆ ನೀಡಬೇಕು. ಇನ್ನೊಂದು ಸಲ ಪ್ರಥಮ್ ಸಹವಾಸಕ್ಕೆ ನಮ್ಮ ಫ್ಯಾನ್ಸ್ ಬರಲ್ಲ ಅಂತ ಅವರು ಹೇಳಬೇಕು ಹಾಗಾಗಿ ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಮುಂದುವರಿಸುತ್ತೇನೆ” ಎಂದರು.

“ಕೆಲವು ಫೇಕ್ ಸೋಶಿಯಲ್ ಮೀಡಿಯಾ ಪೇಜ್​​ಗಳು ಇವೆ. ಅವೆಲ್ಲ ಪೇಜ್​​ಗಳು ಡಿಲೀಟ್ ಆಗಬೇಕು. ದರ್ಶನ್ ನೀಡುವ ಮುಖಾಂತರ ಅವರ ಫ್ಯಾನ್ಸ್ ಬಾಯಿ ಮುಚ್ಚಿಸಬೇಕು. ಇನ್ನು ಮುಂದೆ ಯಾವುದೇ ನಟರ ಬಗ್ಗೆ ಟ್ರೋಲ್ ಮಾಡಬಾರದು” ಎಂದು ಪ್ರಥಮ್ ಬೇಡಿಕೆ ಇಟ್ಟಿದ್ದಾರೆ.

ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾ ಮತ್ತು ನಟ ಪ್ರಥಮ್ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿನ ಆರೋಪ ಪ್ರತ್ಯಾರೋಪಗಳು ಹಾಗೂ ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗ, ನಟ ಶಿವರಾಜ್‌ಕುಮಾರ್ ಸೇರಿದಂತೆ ಬಹತೇಕರು ಬೆಂಬಲಕ್ಕೆ ನಿಂತಿದ್ದರು.

ಈಗ ಇದು ಕಾನೂನು ಹೋರಾಟ, ಉಪವಾಸ ಸತ್ಯಾಗ್ರಹಕ್ಕೂ ಕಾರಣವಾಗಿದೆ. ಪೊಲೀಸ್‌ ಅಧಿಕಾರಿಗಳ ಸಲಹೆಯಂತೆ ಠಾಣೆಯ ಮುಂದೆ ನಡೆಯಬೇಕಿದ್ದ ಪ್ರಥಮ್ ಸತ್ಯಾಗ್ರಹ, ಫಿಲ್ಮ್ ಛೇಂಬರ್‌ ಮುಂದೆ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ.

ಇನ್ನು D Fans Company ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ‘ಕೆಲವು ಮೂರ್ಖರು ಡಿಬಾಸ್ ಸೆಲೆಬ್ರೆಟಿಸ್ ಹೆಸರು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಸೆಲೆಬ್ರಿಟಿಸ್ ಗಳು ಇದಕ್ಕೆ ಪ್ರತಿಕ್ರಿಯೆ ನೀಡಬಾರದೆಂದು ಮನವಿ’ ಎಂದು ಹೇಳಿದೆ.

‘ಮತ್ತೊಂದು ವಿಷಯ ಏನಂದರೆ ಈ ವಿಷಯ ಹಿಡಿಕೊಂಡು ಮೀಡಿಯಾಗೆ ಹೋಗಿ ತಮ್ಮ ಪ್ರಚಾರ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಎಲ್ಲಾ ಸೆಲೆಬ್ರಿಟಿಸ್ ಗಳು ಶಾಂತವಾಗಿ ಇರಬೇಕೆಂದು ಮನವಿ’

‘ಪ್ರತಿಯೊಬ್ಬ ಸೆಲೆಬ್ರಿಟಿಸ್‌ಗಳಿಗೂ ದಯವಿಟ್ಟು ಶಾಂತ ರೀತಿಯಿಂದ ವರ್ತಿಸಿ ಯಾವುದೇ ವಿಚಾರಕ್ಕೆ ಹೋಗದೆ ಹಾಗೂ ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ಕೊಡದೆ ಇರಬೇಕೆಂದು ಮನವಿ’ ಎಂದು ತಿಳಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version