Home ಸುದ್ದಿ ರಾಜ್ಯ Government Employee: ಪಿಂಚಣಿ ಪಡೆಯುವವರಿಗೆ ಬ್ಯಾಂಕ್ ಅಪ್‌ಡೇಟ್

Government Employee: ಪಿಂಚಣಿ ಪಡೆಯುವವರಿಗೆ ಬ್ಯಾಂಕ್ ಅಪ್‌ಡೇಟ್

0

Government Employee. ನಿವೃತ್ತ ಸರ್ಕಾರಿ ನೌಕರರು ಕೆನರಾ ಬ್ಯಾಂಕ್‌ನಿಂದ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಆದರೆ ಈಗ ಬ್ಯಾಂಕ್ ಪಿಂಚಣಿ ಕುರಿತು ಅಪ್‌ಡೇಟ್ ನೀಡಿದೆ.

ಈ ಕುರಿತು ಅಧ್ಯಕ್ಷರು, ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘ, ಲೋಕಾಯುಕ್ತ ಕಚೇರಿ ಎದುರು, ಬೆಂಗಳೂರು ಇವರಿಗೆ ಪತ್ರವನ್ನು ಬರೆಯಲಾಗಿದ್ದು, ಪತ್ರವು ಮಾಸಿಕ ಪಿಂಚಣಿ ಜಮಾ ದಿನಾಂಕವನ್ನು ಬದಲಾವಣೆ ಮಾಡುವ ಕುರಿತು ಎಂಬ ವಿಷಯ ಒಳಗೊಂಡಿದೆ.

ಪತ್ರದ ವಿವರ: ಕೆನರಾ ಬ್ಯಾಂಕ್‌, ಭಾರತ ಸರ್ಕಾರದ ಒಡಂಬಡಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್‌ ದೇಶದಾದ್ಯಂತ ತನ್ನ ಹಾಜರಾತಿಯನ್ನು ಹೊಂದಿದ್ದು, ಕೇಂದ್ರ ನಾಗರಿಕ ರಕ್ಷಣಾ, ರೈಲು, ಅಂಚೆ, ದೂರಸಂಪರ್ಕ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಪಿಂಚಣಿಯನ್ನು ವಿತರಿಸುತ್ತಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಪಿಂಚಣಿಯಲ್ಲಿನ ನಮ್ಮ ಪಾಲು ಸುಮಾರು 1.57 ಲಕ್ಷವಾಗಿದೆ.

ಪಿಂಚಣಿದಾರರು ನಮ್ಮ ದೇಶದ ಹಿರಿಯ ನಾಗರಿಕರಾಗಿದ್ದು, ಅವರಿಗೆ ತ್ವರಿತ ಕಾಳಜಿ ಮತ್ತು ಗಮನ ಹರಿಸುವುದು ಅಗತ್ಯವಾಗಿದೆ. ಸಮಯಕ್ಕೆ ಅನುಗುಣವಾಗಿ, ಕೆನರಾ ಬ್ಯಾಂಕ್ ಪಿಂಚಣಿದಾರರ ಹಿತಾಸಕ್ತಿಗಾಗಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತ ಬಂದಿದೆ.

ಇತ್ತೀಚೆಗೆ, ನಮ್ಮ ಪಿಂಚಣಿದಾರರಿಗೆ (5 ಅವಲಂಬಿತರನ್ನು ಒಳಗೊಂಡಂತೆ) ಟಾಟಾ 1MG ಸಹಯೋಗದ ಮೂಲಕ ಅಸೀಮಿತ ಉಚಿತ ಆನ್‌ಲೈನ್ ವೈದ್ಯಕೀಯ ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದೆ.

ಹಿಂದಿನಂತೆ, ಪ್ರತಿ ತಿಂಗಳು ಕರ್ನಾಟಕ ರಾಜ್ಯ ಪಿಂಚಣಿದಾರರ ಪಿಂಚಣಿಯನ್ನು ಆ ತಿಂಗಳ ಕೊನೆಯ ಕೆಲಸದ ದಿನದಲ್ಲಿ CPPC ಮೂಲಕ ಜಮಾ ಮಾಡಲಾಗುತ್ತಿತ್ತು. ಪಿಂಚಣಿದಾರರು ಹಾಗೂ ಕರ್ನಾಟಕ ಪಿಂಚಣಿದಾರರ ಸಂಘದಿಂದ ಹಲವು ವಿನಂತಿಗಳನ್ನು ಸ್ವೀಕರಿಸಿದ ನಂತರ,ಪಿಂಚಣಿದಾರರ ಸೌಲಭ್ಯವನ್ನು ಪರಿಗಣಿಸಿ ಬದಲಾವಣೆ ಮಾಡಲಾಗಿದೆ.

ಸೆಪ್ಟೆಂಬರ್ 2025ರ ತಿಂಗಳಿನಿಂದ ಪಿಂಚಣಿ ಕೊನೆಯ ನಾಲ್ಕು ಕೆಲಸದ ದಿನಗಳಲ್ಲಿ ಮೊದಲನೆ ದಿನ ಜಮಾ ಮಾಡಲಾಗುವುದು ಎಂದು ಹೇಳಿದೆ. ಉದಾಹರಣೆ: ಅಕ್ಟೋಬರ್ 2025ರಲ್ಲಿ ಪಿಂಚಣಿ 28.10.2025ರಂದು ಜಮಾ ಮಾಡಲಾಗುವುದು.

NO COMMENTS

LEAVE A REPLY

Please enter your comment!
Please enter your name here

Exit mobile version