Home ಸುದ್ದಿ ದೇಶ ಭಾರತೀಯ ಪ್ರಜೆಯಾಗುವ ಮೊದಲೇ ಮತದಾರರ ಪಟ್ಟಿ ಸೇರಿದ್ದ ಸೋನಿಯಾ

ಭಾರತೀಯ ಪ್ರಜೆಯಾಗುವ ಮೊದಲೇ ಮತದಾರರ ಪಟ್ಟಿ ಸೇರಿದ್ದ ಸೋನಿಯಾ

0

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತೀಯ ಪ್ರಜೆಯಾಗುವ ಮೊದಲೇ 45 ವರ್ಷಗಳ ಹಿಂದೆ ದೇಶದ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು ಎಂದು ಬಿಜೆಪಿ ನೇರ ಆರೋಪ ಮಾಡಿದೆ. 1946ರಲ್ಲಿ ಇಟಲಿಯಲ್ಲಿ ಜನಿಸಿದ್ದ ಸೋನಿಯಾ ಭಾರತೀಯ ನಾಗರಿಕರಾಗುವ ಮೊದಲೇ 1980ರಿಂದ 1982ರವರೆಗೆ ಮತದಾರರ ಪಟ್ಟಿಯಲ್ಲಿದ್ದರು ಎಂದು ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ಮೂಲಕ ಮತದಾರರ ಪಟ್ಟಿಯಲ್ಲಿ ಅಕ್ರಮ ಮೊದಲಿನಿಂದಲೇ ನಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಠಾಕೂರ್ ಹೇಳಿಕೆಯನ್ನು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದು, ಮತಪಟ್ಟಿಯಿಂದ ನಕಲು ಪ್ರತಿಯನ್ನೂ ಲಗತ್ತಿಸಿದ್ದಾರೆ. ಇದು ಸೋನಿಯಾ ಅವರು ಪೌರತ್ವ ಪಡೆಯುವ ಮೊದಲೇ ಮತದಾರರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಬಿಜೆಪಿ ಆರೋಪವೇನು?

  • 1968 ರಲ್ಲಿ ರಾಜೀವ್ ಅವರನ್ನು ವಿವಾಹವಾಗಿದ್ದ ಸೋನಿಯಾ, ಆಗಿನ ಇಂದಿರಾ ಗಾಂಧಿ ನಿವಾಸದಲ್ಲಿದ್ದಾಗಲೇ ಮತಪಟ್ಟಿಗೆ ಸೇರ್ಪಡೆಯಾಗಿದ್ದರು.
  • 1980 ರ ಲೋಕಸಭಾ ಚುನಾವಣೆಗೆ ಮುನ್ನ ನವದೆಹಲಿಯ ಕ್ಷೇತ್ರದ ಮತಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಅವರನ್ನು ಸೇರಿಸಲಾಗಿತ್ತು.
  • ಇದು ಭಾರತೀಯ ಪ್ರಜೆಯಾದವರು ಮಾತ್ರ ಮತದಾರರಾಗಿ ನೋಂದಣಿಯಾಗಬೇಕೆಂಬ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
  • 1983 ರಲ್ಲಿ ಈ ವಿಷಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಯಿತು.

ಕಾಂಗ್ರೆಸ್ ಏನು ಹೇಳುತ್ತದೆ?

  • ಸೋನಿಯಾ ಗಾಂಧಿ ತಮ್ಮನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಿ ಎಂದು ಯಾವತ್ತೂ ನಾವು ವಿನಂತಿ ಮಾಡಿಕೊಂಡಿರಲಿಲ್ಲ.
  • ಆ ಕಾಲದ ಚುನಾವಣಾ ಅಧಿಕಾರಿಗಳೇ ಅದನ್ನು ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗವೇ ಹೊಣೆ ಹೊರಬೇಕಾಗುತ್ತದೆ..
  • ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಯೂ ಹೌದು, ಅದು ತನ್ನದೇ ನಿರ್ಧಾರ ಕೈಗೊಳ್ಳುತ್ತದೆ.
  • ಇಂದು ಚುನಾವಣಾ ಆಯೋಗ ಬಿಜೆಪಿಯ ಭಾಗವಾಗಿದೆ. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.

ಎಸ್‌ಐಆರ್ ವಿರೋಧಿಸಿ ರಾಹುಲ್ ಯಾತ್ರೆ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ವಿರೋಧಿಸಿ ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಬ್ಲಾಕ್ ನಾಯಕರು `ವೋಟ್ ಅಧಿಕಾರ್ ಯಾತ್ರಾ’ ನಡೆಸಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ವಿಷಯವನ್ನು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಪ್ಟೆಂಬರ್ 1ರಂದು ಪಟನಾದ ಗಾಂಧಿ ಮೈದಾನದಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳು ಬೃಹತ್ ರ‍್ಯಾಲಿ ನಡೆಸಲಿವೆ. ಮತಗಳ್ಳತನ ತಮಗೆ ಮಾಡು ಇಲ್ಲವೆ ಮಡಿ ಹೋರಾಟವಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಯಾತ್ರೆಗೂ ಮೊದಲು ಸೆ. 14ರಂದು ಎಲ್ಲ ಜಿಲ್ಲೆಗಳಲ್ಲಿ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version