Home ಸುದ್ದಿ ದೇಶ ಮನ್ ಕೀ ಬಾತ್: ಸ್ವದೇಶಿ ಅಭಿಯಾನ ನಿಮ್ಮ ಶಾಪಿಂಗ್ ಮಂತ್ರವಾಗಲಿ

ಮನ್ ಕೀ ಬಾತ್: ಸ್ವದೇಶಿ ಅಭಿಯಾನ ನಿಮ್ಮ ಶಾಪಿಂಗ್ ಮಂತ್ರವಾಗಲಿ

0

“ಪ್ರಧಾನಿ ಮೋದಿ ‘ಮನ್ ಕಿ ಬಾತ್’ ನಲ್ಲಿ ಎಸ್‌ ಎಲ್‌ ಭೈರಪ್ಪನವರ ಸ್ಮರಣೆ ಮಾಡಿದ್ದು ಯುವ ಪೀಳಿಗೆಗೆ ಭೈರಪ್ಪ ಅವರ ಕೃತಿಗಳು ಓದುವಂತೆ ಸಲಹೆ ನೀಡಿದ್ದಾರೆ”

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 28) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 126 ನೇ ಸಂಚಿಕೆಯಲ್ಲಿ ಮಾತನಾಡಿ ದೇಶದ ಯುವಕರಿಗೆ ಶಹೀದ್ ಭಗತ್ ಸಿಂಗ್ ಸ್ಫೂರ್ತಿ, ಲತಾ ಮಂಗೇಶ್ಕರ್ ಸ್ಮರಣೆ, ಛಠ್ ಹಬ್ಬ, ಖಾದಿ, ಮತ್ತು ಆರ್‌ಎಸ್‌ಎಸ್ ಶತಮಾನಾಚರಣೆ ಕುರಿತು ಹೃದಯಸ್ಪರ್ಶಿ ಸಂದೇಶ ನೀಡಿದರು. ಇತ್ತಿಚೆಗೆ ನಿಧನರಾದ ಸಾಹಿತಿ ಎಸ್. ಎಲ್. ಬೈರಪ್ಪ ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದರು.

ದಿವಂಗತ ಎಸ್‌ಎಲ್ ಭೈರಪ್ಪ ಅವರ ಸ್ಮರಣೆ: ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಭೈರಪ್ಪನವರ ಜೊತೆಗೆ ನನ್ನಲ್ಲಿನ ಅಪಾರ ಒಡನಾಟವನ್ನು ನಾನು ಎಂದಿಗೂ ಮರೆಯಲಾರೆ. ಭಾರತೀಯ ಯುವ ಪೀಳಿಗೆಯ ಮುಂದಿನ ಪೀಳಿಗೆಗೆ ಸರಿಯಾದ ಸಾಮಾಜಿಕ ಮಾರ್ಗದರ್ಶನ ನೀಡುವಲ್ಲಿ ಪಾತ್ರ ವಹಿಸಿವೆ. ಭೈರಪ್ಪನವರ ಕೃತಿಗಳು ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಲವು ಭಾಷೆಗಳಲ್ಲಿ ಲಭ್ಯವಿವೆ. ಈ ಕಾರ್ಯಕ್ರಮದ ಮೂಲಕ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಮತ್ತು ಯುವಕರು ಅವರ ಪುಸ್ತಕಗಳನ್ನು ಓದಲು ಪ್ರೇರೇಪಿತರಾಗಲಿ ಎಂದು ಆಶಿಸುತ್ತೇನೆ ಎಂದರು.

ಶಹೀದ್ ಭಗತ್ ಸಿಂಗ್: ದೇಶದ ಯುವಜನತೆಗೆ ಸ್ಫೂರ್ತಿ : ಪ್ರಧಾನಿ ಮೋದಿ ಅವರು ಶಹೀದ್ ಭಗತ್ ಸಿಂಗ್ ಅವರ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಎದುರು ತಮ್ಮ ಜೀವವನ್ನು ಅರ್ಪಿಸಿದ ಭಗತ್ ಸಿಂಗ್ ಅವರು ಯುವಕರಿಗೆ ಶ್ರದ್ಧೆಯಲ್ಲಿಯೂ, ಪ್ರೇರಣೆಯಲ್ಲಿಯೂ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. “ದೇಶಕ್ಕಾಗಿ ಗಲ್ಲು ಶಿಕ್ಷೆಯನ್ನು ಸ್ವೀಕರಿಸುವ ಮೊದಲು, ಭಗತ್ ಸಿಂಗ್ ಅವರು ಬ್ರಿಟಿಷರಿಗೆ ತಮ್ಮ ಮನೋಭಾವವನ್ನು ಪತ್ರ ಮೂಲಕ ತಿಳಿಸಿದ್ದಾರೆ. ಅವರು ತಮ್ಮ ಜೀವವನ್ನು ಶ್ರದ್ಧೆಯೊಂದಿಗೆ ಅರ್ಪಿಸಿದ್ದರು. ಪ್ರತಿಯೊಬ್ಬ ಭಾರತೀಯ, ವಿಶೇಷವಾಗಿ ಯುವಕರು, ಅವರ ಧೈರ್ಯದಿಂದ ಪ್ರೇರಣೆಯನ್ನು ಪಡೆಯಬೇಕು” ಎಂದು ಅವರು ಹೇಳಿದರು.

ಲತಾ ಮಂಗೇಶ್ಕರ್ ಸ್ಮರಣೆ: ಪ್ರಧಾನಿ ಅವರು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ತಮ್ಮ ಗೌರವ ವ್ಯಕ್ತಪಡಿಸಿದರು. ಅವರ ಹಾಡುಗಳು ಮಾನವ ಭಾವನೆಗಳನ್ನು ತಲುಪಿಸುತ್ತವೆ ಮತ್ತು ದೇಶಭಕ್ತಿಗೆ ಪ್ರೇರಣೆ ನೀಡುತ್ತವೆ ಎಂದರು. “ಲತಾ ದೀದಿಯ ಹಾಡುಗಳು ಮತ್ತು ಸುಧೀರ್ ಫಡ್ಕೆ ಅವರ ಸಂಗೀತ ಸಂಯೋಜನೆ ನನ್ನ ಹೃದಯಕ್ಕೆ ತುಂಬಾ ಸಾನ್ನಿಧ್ಯ ತಂದಿವೆ. ಅವರೊಂದಿಗೆ ನನ್ನ ಪ್ರೀತಿಯ ಬಂಧ ಸದಾ ಉಳಿದಿದೆ. ಅವರು ಪ್ರತಿ ವರ್ಷ ನನಗೆ ರಾಖಿಯನ್ನು ಕಳುಹಿಸುತ್ತಿದ್ದರು” ಎಂದು ಅವರು ಹೇಳಿದರು.

ಗಾಯಕ ಝುಬೀನ್ ಗರ್ಗ್ ಸ್ಮರಣೆ: ಝುಬೀನ್ ಗರ್ಗ್ ಅವರ ಅಕಾಲಿಕ ನಿಧನಕ್ಕೆ ಜನರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಝುಬೀನ್ ಗರ್ಗ್ ದೇಶಾದ್ಯಂತ ಹೆಸರು ಮಾಡಿದ ಪ್ರಸಿದ್ಧ ಗಾಯಕ. ಅವರು ಅಸ್ಸಾಮಿ ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಝುಬೀನ್ ಗರ್ಗ್ ನಮ್ಮ ನೆನಪಿನಲ್ಲಿದ್ದಾರೆ. ಅವರು ಯಾವಾಗಲೂ ಇರುತ್ತಾರೆ. ಅವರ ಸಂಗೀತವು ಮುಂದಿನ ಪೀಳಿಗೆಯನ್ನು ಆಕರ್ಷಿಸುತ್ತಲೇ ಇರುತ್ತದೆ ಎಂದರು. 

ಭಾರತೀಯ ನೌಕಾಪಡೆ ಧೈರ್ಯ ಪ್ರಶಂಸೆ: ಪ್ರಧಾನಿ ಮೋದಿ ಅವರು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪಾ ಅವರನ್ನು ಪರಿಚಯಿಸುತ್ತಾ, ನಾವಿಕ ಸಾಗರ್ ಪರಿಕ್ರಮೆಯಲ್ಲಿ ತೋರಿದ ಧೈರ್ಯ ಮತ್ತು ದೃಢಸಂಕಲ್ಪವನ್ನು ಪ್ರಶಂಸೆ ಮಾಡಿದರು.

ಛಠ್ ಹಬ್ಬಕ್ಕೆ ಯುನೆಸ್ಕೋ ಗುರುತಿನ ಪ್ರಯತ್ನ: ಭಾರತ ಸರ್ಕಾರ ಛಠ್ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಿಯವರು ತಿಳಿಸಿದರು. “ಛಠ್ ಪೂಜೆ ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಆಚರಿಸಬಹುದಾದ ಈ ಹಬ್ಬವು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲ್ಪಡುತ್ತಿದೆ. ಇದರಿಂದ ಜಗತ್ತಿನ ಪ್ರತಿಯೊಬ್ಬರೂ ಇದರ ವೈಭವವನ್ನು ಅನುಭವಿಸಬಹುದಾಗಿದೆ” ಎಂದರು.

ಖಾದಿ ಖರೀದಿ ಮತ್ತು ಸ್ವದೇಶಿ ಅಭಿಯಾನ: ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ಜನರಿಗೆ ಪ್ರಧಾನಿ ಮೋದಿ ಒತ್ತಾಯಿಸಿದರು. “ಖಾದಿ, ಕೈಮಗ್ಗ ವಲಯ ಮತ್ತು ದೇಶೀಯ ಉದ್ಯಮಗಳಲ್ಲಿ ನಾವೀನ್ಯತೆಯನ್ನು ಪ್ರೇರೇಪಿಸುತ್ತದೆ. #VocalforLocal ಅಭಿಯಾನದಲ್ಲಿ ಪಾಲ್ಗೊಳ್ಳಿ” ಎಂದರು. ಅವರು ತಮಿಳುನಾಡಿನ ಯಾಜ್ ನ್ಯಾಚುರಲ್ಸ್ ಮತ್ತು ಜಾರ್ಖಂಡ್‌ನ ಜೋಹರ್‌ಗ್ರಾಮ್ ಬ್ರ್ಯಾಂಡ್ ಉದಾಹರಣೆ ನೀಡಿದರು, ಜನರ ಜೀವನಕ್ಕೆ ಉದ್ಯೋಗ ಸೃಷ್ಟಿಸುವ ತಮ್ಮ ಪ್ರಯತ್ನಗಳನ್ನು ಗಮನಾರ್ಹವಾಗಿ ವರ್ಣಿಸಿದರು.

ಆರ್‌ಎಸ್‌ಎಸ್ ಶತಮಾನಾಚರಣೆ: ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷದ ಶತಮಾನಾಚರಣೆಯನ್ನು ಸ್ಮರಿಸಿ, ಅದರ ಸೇವಾ ಮನೋಭಾವ, ಶಿಸ್ತಿನ ಮಹತ್ವ ಮತ್ತು ದೇಶದ ಸೇವೆಯಲ್ಲಿ ನಿರಂತರ ಪಾತ್ರವನ್ನು ಪ್ರಶಂಸಿಸಿದರು. “ಸ್ವಯಂಸೇವಕರು ನೈಸರ್ಗಿಕ ವಿಕೋಪ, ಸಂಕುಲಿತ ಪರಿಸ್ಥಿತಿಗಳಲ್ಲಿ ಮೊದಲಿಗೆ ತಲುಪುತ್ತಾರೆ. ದೇಶದ ಸೇವೆಗೆ ತಮ್ಮನ್ನು ಅರ್ಪಿಸುವ ಪ್ರತಿಯೊಬ್ಬ ಸ್ವಯಂಸೇವಕ ಶ್ರೇಷ್ಠ” ಎಂದರು.

ಈ 126ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ದೇಶದ ಯುವಜನತೆಗೆ ಶ್ರದ್ಧೆ, ಧೈರ್ಯ, ಸಾಂಸ್ಕೃತಿಕ ಪರಂಪರೆ, ಸ್ವದೇಶಿ ಚಿಂತನೆ ಮತ್ತು ಸೇವಾ ಭಾವನೆಗಳ ಪ್ರಮುಖ ಸಂದೇಶಗಳನ್ನು ಹಂಚಿಕೊಂಡರು. ದೇಶದ ಯುವಕರು, ಕೈಮಗ್ಗ ವಲಯ, ಸಾಂಸ್ಕೃತಿಕ ಹಬ್ಬಗಳು ಮತ್ತು ಸ್ವಯಂಸೇವಕರ ಮಹತ್ವವನ್ನು ಅರಿತು, ಇವುಗಳಿಂದ ಪ್ರೇರಣೆಯನ್ನು ಪಡೆದು ಮುಂದುವರಿಯಬೇಕು ಎಂಬ ಉದ್ದೇಶವೇ ಪ್ರಧಾನಿಯವರ ಸಂದೇಶದಲ್ಲಿ ಸ್ಪಷ್ಟವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version