Home ತಾಜಾ ಸುದ್ದಿ BPL CARD: ಸರ್ಕಾರದ ವಿರುದ್ಧ ದೊಡ್ಡ ಹೋರಾಟ

BPL CARD: ಸರ್ಕಾರದ ವಿರುದ್ಧ ದೊಡ್ಡ ಹೋರಾಟ

0

ಬೆಂಗಳೂರು : 22 ಲಕ್ಷ ಕಾರ್ಡುಗಳನ್ನು ರದ್ದುಗೊಳಿಸಲು ಇಲಾಖೆಗೆ ಗುರಿ ನೀಡಲಾಗಿದೆ ಎಂಬ ಮಾಹಿತಿಯಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ತಿಳಿಸಿದ್ದಾರೆ.
ಕಾಂಗ್ರೆಸ್‌ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ. ಇರುವ ಹಣವನ್ನು ಲಂಚಕ್ಕೆ ಬಳಸಲಾಗುತ್ತಿದೆ. ಶಾಸಕರು ಸರ್ಕಾರದ ಕತ್ತುಪಟ್ಟಿ ಹಿಡಿದಿದ್ದಾರೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್‌ ಶಾಸಕರೇ ದೂರು ಹೇಳುತ್ತಿದ್ದಾರೆ. 25 ಲಕ್ಷ ಕಾರ್ಡ್‌ ರದ್ದುಪಡಿಸಿದರೆ 20,000 ಕೋಟಿ ರೂ. ಬರಬಹುದು. ಆ ಹಣವನ್ನು ಶಾಸಕರಿಗೆ ಕೊಟ್ಟು ಸಮಾಧಾನ ಮಾಡಬಹುದು. ಇದು ಕಾರ್ಡ್‌ ರದ್ದು ಮಾಡುವುದರ ಹಿಂದಿನ ಉದ್ದೇಶ ಎಂದರು.

ಉಚಿತ ರದ್ದಾಗುವುದು ಖಚಿತ: ಉಚಿತ ಬಸ್‌ ಯೋಜನೆ ರದ್ದು ಮಾಡುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮುಂದೆ ಉಚಿತ ವಿದ್ಯುತ್‌ ಯೋಜನೆ ಕೂಡ ರದ್ದಾಗಲಿದೆ. ಶಾಸಕರು ಅನುದಾನವಿಲ್ಲದೆ ದಂಗೆ ಏಳುವ ಸ್ಥಿತಿಗೆ ಹೋಗಿದ್ದಾರೆ.

ಪ್ರತಿ ತಾಲೂಕಿನಲ್ಲಿ ಪ್ರತಿಭಟನೆ: ನಾವು ನಮ್ಮ ಎಲ್ಲಾ ಶಾಸಕರು ಬೀದಿಗಳಿದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಬಾರದು. ರದ್ದುಗೊಂಡ ಕಾರ್ಡ್ ಆದೇಶವನ್ನು ವಾಪಸ್ಸು ಪಡೆಯಬೇಕು, ನಾನು ನಮ್ಮ ಎಲ್ಲಾ ಶಾಸಕರಿಗೂ ಪತ್ರ ಬರೆದು ಕರೆ ಕೊಡ್ತೀನಿ. ಅಧಿಕಾರಿಗಳೇ ನಿಮ್ಮ ಆಫೀಸ್‌ಗೆ ಬಂದು ಬೀಗ ಹಾಕ್ತೀವಿ. ಇವಾಗ ಕಾರ್ಡ್ ರದ್ದು ಮಾಡಿದ್ದು ವಾಪಸ್ಸು ಕೊಡಿ ಇಲ್ಲದಿದ್ರೆ ಸರ್ಕಾರದ ವಿರುದ್ಧ ನಾವು ದೊಡ್ಡ ಹೋರಾಟ ಮಾಡುತ್ತೇವೆ ಎಂದರು.

Exit mobile version