Home ನಮ್ಮ ಜಿಲ್ಲೆ ಬೆಂಗಳೂರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ಪೆನ್ನ ಓಬಳಯ್ಯ ನಿಧನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ಪೆನ್ನ ಓಬಳಯ್ಯ ನಿಧನ

0

ಬೆಂಗಳೂರು: ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಪ್ರಸಿದ್ಧ ವೀಣೆ ತಯಾರಕ, ಶತಾಯುಷಿ ಪೆನ್ನ ಓಬಳಯ್ಯ (103) ರವರು ರವಿವಾರ ತಡರಾತ್ರಿ ನಿಧನರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಸಿಂಪಾಡಿಪುರದ ನಿವಾಸಿಯಾಗಿದ್ದ ಓಬಳಯ್ಯ ಅವರು ಇಡೀ ದೇಶದ ವಾದ್ಯಪ್ರೇಮಿಗಳ ಹೃದಯ ಗೆದ್ದ “ವೀಣೆ ಬ್ರಹ್ಮ” ಎಂದು ಗುರುತಿಸಿಕೊಂಡಿದ್ದರು.

ಓಬಳಯ್ಯ ಅವರು ಹಲವು ದಶಕಗಳಿಂದ ಸಾಂಪ್ರದಾಯಿಕ ವೀಣೆ ತಯಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ನೂರಾರು ಶಿಷ್ಯರಿಗೆ ತಯಾರಿಕೆ ಕೌಶಲ್ಯ ಬೋಧನೆ ಮಾಡಿದ್ದರು. ಭಾರತದ ಅನೇಕ ರಾಜ್ಯಗಳಲ್ಲಿ ಅವರ ವೀಣೆಗಳು ಪ್ರಸಿದ್ಧವಾಗಿದ್ದವು. ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡಿದ್ದಲ್ಲದೆ ಹಲವಾರು ಜನರಿಗೆ ವೀಣೆ ತಯಾರಿಸುವುದನ್ನ ಕಲಿತಿದ್ದಾರೆ.

ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೊನ್ನೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದ ಬಳಿಕ ಅವರು ಅಸ್ವಸ್ಥರಾಗಿದ್ದರಿಂದ ಅವರ ಮಕ್ಕಳು ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಪ್ರಶಸ್ತಿ ಸ್ವೀಕಾರದ ಮರುದಿನವೇ ಅವರ ನಿಧನ ಸಂಭವಿಸಿದ್ದು, ಇದು ನಾಡಿಗೆ ದುಃಖ ತಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ : “ವೀಣೆ ತಯಾರಿಕೆಯಲ್ಲಿ ಅಪಾರ ಸೇವೆ ಸಲ್ಲಿಸಿದ ಪೆನ್ನ ಓಬಳಯ್ಯ ಅವರ ನಿಧನವು ನಾಡಿಗೆ ದೊಡ್ಡ ನಷ್ಟ. ಅವರು ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸಿದ ಅಪರೂಪದ ತಜ್ಞರು. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬಕ್ಕೆ ಧೈರ್ಯ ದೊರಕಲಿ” ಎಂದು ಹೇಳಿದ್ದಾರೆ.

ಸಂಗೀತ ವಲಯದ ಅನೇಕ ಹಿರಿಯರು ಮತ್ತು ಕಲಾವಿದರು ಸಹ ಪೆನ್ನ ಓಬಳಯ್ಯ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version