Home ನಮ್ಮ ಜಿಲ್ಲೆ ಕೋಲಾರ 3 ಸಾವಿರ ಕೋಟಿ ವೆಚ್ಚ ಮಾಡಿಯೇ ಇಲ್ಲ

3 ಸಾವಿರ ಕೋಟಿ ವೆಚ್ಚ ಮಾಡಿಯೇ ಇಲ್ಲ

0

ಕೋಲಾರ: ಕೋವಿಡ್ ಸಂದರ್ಭದಲ್ಲಿ 3 ಸಾವಿರ ಕೋಟಿ ವೆಚ್ಚ ಮಾಡಿಯೇ ಇಲ್ಲ, ಬೇಕಿದ್ದರೆ ಶ್ವೇತಪತ್ರ ಹೊರಡಿಸುವೆ ಎಂದು ಸಚಿವ ಡಾ. ಸುಧಾಕರ ‌ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ‌ಇದರ ಬಗ್ಗೆ‌ ಚರ್ಚೆ ಮಾಡಲು ಅವಕಾಶ ಕೊಟ್ಟಾಗ ಸಿದ್ದರಾಮಯ್ಯ ಅವರು‌ ಪಲಾನಯ‌ ಮಾಡಿದರು. ಆಲಿಬಾಬಾ ಕಳ್ಳರ ಬಗ್ಗೆ ಮಾತನಾಡಿರುವ ಕುರಿತು ನಾನು ವೈಯಕ್ತಿಕವಾಗಿ ಅವರ‌ ಹಾಗೆ ಮಾತನಾಡುವ ಅಭ್ಯಾಸವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾರ ಮೇಲೂ ವೈಯಕ್ತಿಕವಾಗಿ ಅಪಾದನೆಗಳನ್ನು ಮಾಡಿಲ್ಲ. ವಸ್ತುಸ್ಥಿತಿಯಿಂದ‌ ಕೂಡಿರುವಂತಹ ಮತ್ತು ವಿಷಯಾಧಾರಿತವಾದ ಅಪಾದನೆಗಳ ಬಗ್ಗೆ ಮಾತನಾಡಿರುವೆ. ಅಪಾದನೆಗಳಲ್ಲಿ ಸತ್ಯ ಇದ್ದರೆ ಒಪ್ಪಿಕೊಳ್ಳಲಿ, ಸತ್ಯವಿಲ್ಲದಿದ್ದರೆ ಸಮಾಜಯಿಷಿ ನೀಡಲಿ. ಅಲ್ಲದೇ ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿ‌ ಶಕ್ತಿ ಕೊಟ್ಟಿದ್ದೀವೆ ಎಂದರು.

Exit mobile version