Home News 3ನೇ ಸ್ಥಾನಕ್ಕೇರಿದ ಮೈಸೂರು ಸ್ಯಾಂಡಲ್

3ನೇ ಸ್ಥಾನಕ್ಕೇರಿದ ಮೈಸೂರು ಸ್ಯಾಂಡಲ್

KSDL  ₹416 ಕೋಟಿ ಸಾರ್ವಕಾಲಿಕ ಲಾಭ

ಬೆಂಗಳೂರು: ಆಧುನಿಕ ವ್ಯಾಪಾರ ಮಾದರಿ, ಪಾರದರ್ಶಕತೆ, ದಕ್ಷತೆ, ಮಾರುಕಟ್ಟೆ ವಿಸ್ತರಣೆ ಮತ್ತು ಗುಣಮಟ್ಟ ಸ್ಥಿರತೆಯನ್ನು KSDL ಅಳವಡಿಸಿಕೊಂಡಿರುವ ಪರಿಣಾಮ ಸಾರ್ವಕಾಲಿಕ ದಾಖಲೆಯ ಲಾಭಗಳಿಸಿದೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ 2024-25ನೇ  ಸಾಲಿನಲ್ಲಿ 1,788 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ ಗಳಿಸಿದೆ.  ಕಳೆದ ವರ್ಷಕ್ಕಿಂತಲೂ  ₹54 ಕೋಟಿ ಅಧಿಕ ಲಾಭ ದಾಖಲಿಸಿದೆ.

ಕಳೆದ ಡಿಸೆಂಬರ್ ನಲ್ಲಿ  ಸರ್ಕಾರಕ್ಕೆ ₹ 108 ಕೋಟಿ ಲಾಭಾಂಶ ಹಸ್ತಾಂತರ ಮಾಡಿದ್ದ KSDL ಈ ಬಾರಿ ₹123 ಕೋಟಿ ಮೊತ್ತ ಹಸ್ತಾಂತರ ಮಾಡಿ ಬೊಕ್ಕಸ ತುಂಬಿಸಲಿದೆ. ಲಾಭಾಂಶ ತಂದುಕೊಡುವ ಸರಕಾರಿ ಉದ್ದಿಮೆಗಳ ಪೈಕಿ 21ನೇ ಸ್ಥಾನದಲ್ಲಿದ್ದ ಮೈಸೂರು ಸ್ಯಾಂಡಲ್ ವರ್ಷದಿಂದ ವರ್ಷಕ್ಕೆ ದಾಖಲೆ ಲಾಭ ಗಳಿಸುತ್ತ ಈಗ 3ನೇ ಸ್ಥಾನಕ್ಕೇರಿದೆ.

#ವಿಜಯಪುರ ದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ KSDL ಘಟಕವನ್ನು ತೆರೆಯಲಾಗುತ್ತಿದ್ದು ಇದಕ್ಕೆ 50 ಎಕರೆ ಜಾಗವನ್ನು #KIADB ಹಂಚಿಕೆ ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ 1,819 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸುವ ಗುರಿ ಹೊಂದಿದೆ. ಜಿಲ್ಲಾ ಕೇಂದ್ರಗಳಲ್ಲಿ ‘ಸೋಪ್ ಮೇಳ’ ಉತ್ತರ ಭಾರತದಲ್ಲಿ ಮಾರುಕಟ್ಟೆಯ ವಿಸ್ತರಣೆಯಂತಹ  #ನಮ್ಮಸರ್ಕಾರ ದ ವಿನೂತನ ಯೋಜನೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವುದು ಖಚಿತವಾಗಿದೆ ಎಂದಿದ್ದಾರೆ.

Exit mobile version