Home ತಾಜಾ ಸುದ್ದಿ 27, 28ರಂದು ಧಾರವಾಡದಲ್ಲಿ ಕನ್ನಡ ವೈದ್ಯ ಬರಹಗಾರರ 3ನೇ ಸಮ್ಮೇಳನ

27, 28ರಂದು ಧಾರವಾಡದಲ್ಲಿ ಕನ್ನಡ ವೈದ್ಯ ಬರಹಗಾರರ 3ನೇ ಸಮ್ಮೇಳನ

0

ಧಾರವಾಡ: ಕನ್ನಡ ವೈದ್ಯ ಬರಹಗಾರರ 3ನೇ ರಾಜ್ಯ ಸಮ್ಮೇಳನ ಆ. 27 ಹಾಗೂ 28ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ “ಡಾ. ಸ.ಜ. ನಾಗಲೋಟಿಮಠ ವೇದಿಕೆ’ಯಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕ, ಕನ್ನಡ ವೈದ್ಯ ಬರಹಗಾರರ ಸಮಿತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಮುಂಚೆ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಮ್ಮೇಳನಗಳು ನಡೆದಿವೆ ಎಂದರು.

Exit mobile version