Home ತಾಜಾ ಸುದ್ದಿ 2023-24ನೇ ಸಾಲಿನ ಹಿಂಗಾರು ಬೆಂಬಲ ಬೆಲೆಯಲ್ಲಿ ಏರಿಕೆ

2023-24ನೇ ಸಾಲಿನ ಹಿಂಗಾರು ಬೆಂಬಲ ಬೆಲೆಯಲ್ಲಿ ಏರಿಕೆ

0
Agriculture

ನವದೆಹಲಿ: ಪ್ರಧಾನಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ೨೦೨೩-೨೪ ನೇ ಸಾಲಿನ ಹಿಂಗಾರು ಹಂಗಾಮಿನ ಎಲ್ಲ ಬೆಲೆಗಳ ಬೆಂಬಲ ಬೆಲೆ ಹೆಚ್ಚಳದ ಅನುಮೋದನೆ ನೀಡಿ ಮಹತ್ವದ ನಿರ್ಧಾರ ಘೋಷಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಇಲಾಖೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇದು ರೈತರಿಗೆ ಮಹತ್ವದ ಕೊಡುಗೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರನ್ನು ಅಭಿನಂದಿಸಿ ಧನ್ಯವಾದ ತಿಳಿಸಿದ್ದಾರೆ.
ಈ ನಿರ್ಧಾರದನ್ವಯ ಗೋಧಿಗೆ ೨೦೨೨-೨೩ ರಲ್ಲಿದ್ದ ಬೆಂಬಲ ಬೆಲೆಯಲ್ಲಿ ರೂ. ೧೧೦, ಬಾರ್ಲಿಗೆ ರೂ. ೧೦೦, ಕಡಲೆ ಬೇಳೆಗೆ ರೂ. ೧೦೫, ಮಸೂರ ದಾಲ್‌ಗೆ ದಾಖಲೆಯ ರೂ. ೫೦೦, ಸಾಸಿವೆ ಕಾಳಿಗೆ ರೂ. ೪೦೦ ಹಾಗೂ ಕೇಸರಿ (ಕುಸುಬಿ)ಗೆ ರೂ. ೨೦೯ ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ಹಿಂಗಾರು ಹಂಗಾಮಿನ ವ್ಯವಸಾಯದ ರೈತರ ಜೀವನದ ಭದ್ರತೆಯಲ್ಲಿ ಕೇಂದ್ರ ಸರ್ಕಾರದ ಒಂದು ಗಟ್ಟಿ ಹೆಜ್ಜೆಯಾಗಿದ್ದು ಈ ಸರ್ಕಾರ ರೈತರ ಪರ ಸರ್ಕಾರವೆಂಬುದನ್ನು ಪುನಃರುಚ್ಛರಿಸಿದೆ ಎಂದು ಕೂಡಾ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version