Home News 15ರಿಂದ ಬೀದರ್ ಏರ್‌ಪೋರ್ಟ್ ಶುರು

15ರಿಂದ ಬೀದರ್ ಏರ್‌ಪೋರ್ಟ್ ಶುರು

ಬೀದರ್: ಮಹತ್ವದ ಮತ್ತು ಬಹು ನಿರೀಕ್ಷಿತ ಬೆಳವಣಿಗೆಯಲ್ಲಿ ಬೀದರ್ ಏರ್‌ಪೋರ್ಟ್ ಇದೇ ಮಾ. ೧೫ರಿಂದ ಮತ್ತೇ ಪುನಾರಂಭಗೊಳ್ಳಲಿದೆ. ಸೀಟುಗಳ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಬೀದರ್ ವಿಮಾನ ನಿಲ್ದಾಣ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದೆ. ಮಂತ್ರಿ ಈಶ್ವರ್ ಖಂಡ್ರೆ ಮತ್ತು ಬೀದರ್ ಜಿಲ್ಲಾಡಳಿತ ಬೀದರ್ ಏರ್‌ಪೋರ್ಟ್ ಪುನರಾರಂಭಕ್ಕಾಗಿ ನಡೆಸಿದ ಪ್ರಯತ್ನಗಳು ಕೊನೆಗೂ ಫಲಪ್ರದವಾಗಲಿವೆ. `ಬೀದರ್-ಬೆಂಗಳೂರು ಮತ್ತು ಬೆಂಗಳೂರು-ಬೀದರ್ ನಡುವಣ ನಾಗರಿಕ ವಿಮಾನ ಯಾನ ಸೇವೆಗಳನ್ನು ಆರಂಭಿಸಲು ಖಾಸಗಿ ಕಂಪನಿ ಒಪ್ಪಿದೆ’ ಎಂದು ಜಿಲ್ಲಾಡಳಿತದಲ್ಲಿನ ಉನ್ನತ ಮೂಲಗಳು ತಿಳಿಸಿವೆ. ನಾಗರಿಕ ವಿಮಾನದ ಆಗಮನ ಮತ್ತು ನಿರ್ಗಮನದ ಸಮಯ ಕೂಡ ಪ್ರಯಾಣಿಕ ಸ್ನೇಹಿಯಾಗಿರಲಿದೆ ಎಂದೇ ಪ್ರತಿಪಾದಿಸಲಾಗಿದೆ.

Exit mobile version