Home ಅಪರಾಧ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

0

ಉಳ್ಳಾಲ: ಅಪಾರ್ಟ್‌ಮೆಂಟ್ ಕಟ್ಟಡದ 12ನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕುತ್ತಾರು ಖಾಸಗಿ ವಸತಿ ಸಂಕೀರ್ಣದಲ್ಲಿ ಸಂಭವಿಸಿದೆ.
ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹಮ್ಮದ್ ಮತ್ತು ಖಮರ್ಜಹಾ ಬಾನು ರವರ ಪುತ್ರಿ ಹಿಬಾ ಐಮನ್ (15) ಮೃತಪಟ್ಟ ವಿದ್ಯಾರ್ಥಿನಿ. 18 ಮಹಡಿ ಹೊಂದಿರುವ ಖಾಸಗಿ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ಗುರುವಾರ ರಾತ್ರಿ ದಂಪತಿ ಇಬ್ಬರೂ ರಾತ್ರಿ ಪಾಳಿ ಕರ್ತವ್ಯಕ್ಕೆ ಆಸ್ಪತ್ರೆಗೆ ತೆರಳಿದ್ದರು.
ಮನೆಯಲ್ಲಿ ಹಿಬಾ ಮತ್ತು ಆಕೆಯ ಕಿರಿಯ ಸಹೋದರ ಮಾತ್ರ ಇದ್ದರು. ಹಿಬಾ ರಾತ್ರಿ ಬಾಲ್ಕನಿಯಲ್ಲಿ ಬಟ್ಟೆ ಹಾಕಲೆಂದು ಕುರ್ಚಿಯಲ್ಲಿ ನಿಂತಾಗ ಆಯತಪ್ಪಿ ವಸತಿ ಸಂಕೀರ್ಣದ ಕಟ್ಟಡದಿಂದ ಕೆಳಗಡೆ ಬಿದ್ದು ಮೃತಪಟ್ಟಿದ್ದಾರೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಮೃತ ಹಿಬಾ ಮಂಗಳೂರಿನ ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿನಿ. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಲಬುರಗಿ ಆವೃತ್ತಿ ರಜತ ಸಂಭ್ರಮ

Exit mobile version