Home ತಾಜಾ ಸುದ್ದಿ ಹು-ಧಾ ಮಧ್ಯೆ 11.45ರ ವರೆಗೆ ಬಸ್‌ ವ್ಯವಸ್ಥೆ

ಹು-ಧಾ ಮಧ್ಯೆ 11.45ರ ವರೆಗೆ ಬಸ್‌ ವ್ಯವಸ್ಥೆ

0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಧಾರವಾಡಕ್ಕೆ ತಡರಾತ್ರಿ ಸಂಚಾರದ ಅನುಕೂಲತೆಗಾಗಿ ಸಾರ್ವಜನಿಕರಿಂದ ಬೇಡಿಕೆಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಅನುಸಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ತಡರಾತ್ರಿ ಸಾರಿಗೆ ಸೌಲಭ್ಯದ ಅನುಕೂಲತೆಯನ್ನು ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನಿರ್ಧಾರ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಿಆರ್‌ಟಿಎಸ್ ನಿಲುಗಡೆಯಿಂದ ಧಾರವಾಡಕ್ಕೆ ಪ್ರತಿದಿನ ರಾತ್ರಿ ೧೧.೧೫, ೧೧.೩೦ ಹಾಗೂ ೧೧.೪೫ಕ್ಕೆ ನಿರ್ಗಮಿಸುವಂತೆ ನಗರ ಸಾರಿಗೆ ಬಸ್ಸುಗಳನ್ನು ಮೇ ೧೬ರಿಂದ ಕಾರ್ಯಾಚರಣೆ ಪ್ರಾರಂಭಿಸಲಾಗಿರುತ್ತದೆ.
ವಾಹನಗಳು ನಾನ್ ಬಿಆರ್‌ಟಿಎಸ್ ಕಾರಿಡಾರ್(ಮಿಶ್ರಪಥ)ದಲ್ಲಿ ಸಂಚರಿಸುತ್ತವೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version