ಹುಬ್ಬಳ್ಳಿ : ಹುಬ್ಬಳ್ಳಿ – ಸೋಲಾಪುರ ರೈಲ್ವೆ ಮಾರ್ಗದ ಗದಗ- ಹುಟಗಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಲಚ್ಯಾನ – ತಡವಾಳ ಮಾರ್ಗದಲ್ಲಿ ಮಧ್ಯರಾತ್ರಿ 1.30 ರ ಸುಮಾರು ರೈಲ್ವೆ ಇಂಜಿನ್ ಮೂಲಕ ಹಳಿ ಪರಿಶೀಲನಾ ಕಾರ್ಯ ಕೈಗೊಂಡ ವೇಳೆ ಹಳಿ ತಪ್ಪಿದ್ದು ಪತ್ತೆಯಾಗಿದೆ.
ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗುವ ರೈಲುಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಎಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮೂಲಗಳು ತಿಳಿಸಿವೆ.
ರೈಲ್ವೆ ಇಂಜಿನ್ ಮೂಲಕ ರೈಲು ಹಳಿಗಳ ಪರಿಶೀಲನಾ ಕಾರ್ಯ ಎಂಜಿನ್ ಮೂಲಕ ನಡೆಸುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹೀಗೆ ಪರಿಶೀಲನೆ ನಡೆಸಿದ ಮಧ್ಯೆ ರಾತ್ರಿ ಲಚ್ಯಾನ- ತಡವಾಳ ಮಾರ್ಗದಲ್ಲಿ ಹಳಿ ತಪ್ಪಿರುವುದನ್ನು ಪರಿಶೀಲನೆ ನಡೆಸುತ್ತಿದ್ದ ಇಂಜಿನ್ ನ ಲೋಕೊಪೈಲಟ್ ಗಳು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದೆ.
ದುರಸ್ತಿ ಕಾರ್ಯ ನಡೆದಿದ್ದು ಸಂಜೆ ವೇಳೆಗೆ ಪೂರ್ಣಗೊಳ್ಳುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರಿಗೆ ಬಸ್ ವ್ಯವಸ್ಥೆ : ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಸಾಗುವ ರೈಲುಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
ವಿಜಯಪುರ ರೈಲ್ವೆ ನಿಲ್ದಾಣದಲ್ಲಿ 1000 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಕಲಬುರ್ಗಿಗೆ ತೆರಳುವ ಪ್ರಯಾಣಿಕರಿಗೆ ವಿಜಯಪುರದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ರದ್ದು ಪಡಿಸಲಾದ ರೈಲುಗಳು
1- ಸೋಲಾಪುರ – ಹೊಸಪೇಟೆ ( ಟ್ರೇನ್ ಸಂಖ್ಯೆ – 11305)
2- ಹೊಸಪೇಟೆ – ಸೋಲಾಪುರ ( ಟ್ರೇನ್ ಸಂಖ್ಯೆ – 11306)
3- ರಾಯಚೂರು – ವಿಜಯಪುರ ( ಟ್ರೇನ್ ಸಂಖ್ಯೆ – 07664)
4 – ವಿಜಯಪುರ – ಹೈದರಾಬಾದ್ ( ಟ್ರೇನ್ ಸಂಖ್ಯೆ – 17029)
5- ಸೋಲಾಪುರ – ಹುಬ್ಬಳ್ಳಿ ( ಟ್ರೇನ್ ಸಂಖ್ಯೆ -07331)
ನಿರ್ದಿಷ್ಟ ಮಾರ್ಗದಲ್ಲಿ ತಾತ್ಕಾಲಿಕ ರದ್ದುಟ್ರೇನ್ ಗಳು
ಧಾರವಾಡ – ಸೋಲಾಪುರ ಟ್ರೇನ್ ವಿಜಯಪುರ- ಸೋಲಾಪುರ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆಮ
ಹೊಸಪೇಟೆ- ವಿಜಯಪುರ ಟ್ರೇನ್ ವಿಜಯಪುರ- ಸೋಲಾಪುರ ಮಾರ್ಗದಲ್ಲಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಹೈದರಾಬಾದ್ – ವಿಜಯಪುರ ಟ್ರೇನ್ ಸೋಲಾಪುರ – ವಿಜಯಪುರ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸಂಚಾರ ರದ್ದುಪಡಿಸಲಾಗಿದೆ.
ಸೋಲಾಪುರ – ಧಾರವಾಡ ಟ್ರೇನ್ ಸೋಲಾಪುರ – ವಿಜಯಪುರ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸಂಚಸರ ರದ್ದುಪಡಿಸಲಾಗಿದೆ.
ಹೊಸಪೇಟೆ – ಛತ್ರಪತಿ ಶಿವಾಜಿ ಟರ್ಮಿಸ್ ಟ್ರೇನ್ ಹೊಸಪೇಟೆ- ಸೋಲಾಪುರ ಮಾರ್ಗದಲ್ಲಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಸೆ.25 ರಂದು ಮೈಸೂರು – ಪಂಢರಪುರ ರೈಲು ವಿಜಯಪುರದವರೆಗೆ ಮಾತ್ರ ಸಂಚರಿಸುವುದು. ವಿಜಯಪುರದಿಂದ ಪಂಢರಪುರದವರೆಗೆ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಅದೇ ರೀತಿ ಸೆ.26 ರಂದು ಪಂಢರಪುರ- ಮೈಸೂರು ರೈಲು ವಿಜಯಪುರದವರೆಗೆ ಮಾರ್ಗ
ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಭೇಟಿ
ಹಳಿ ತಪ್ಪಿದ ಸ್ಥಳಕ್ಕೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಜೆಯ ವೇಳೆಗೆ ದುರಸ್ತಿ ಕಾರ್ಯ ಪೂರ್ಣವಾಗುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆ ವಲಯ ಸಾರ್ವಜನಿಕ ಸಂಪರ್ಕ ವಿಭಾಗದ ಮೂಲಗಳು ತಿಳಿಸಬರುವ ಭೀಮಾ ಬ್ರಿಡ್ಜ್ ಬಳಿಯ