Home ತಾಜಾ ಸುದ್ದಿ ಹಗಲಿನಲ್ಲೇ ಪ್ರತ್ಯಕ್ಷಗೊಂಡು ಭೀತಿ ಹುಟ್ಟಿಸಿದ ಕಾಡಾನೆ

ಹಗಲಿನಲ್ಲೇ ಪ್ರತ್ಯಕ್ಷಗೊಂಡು ಭೀತಿ ಹುಟ್ಟಿಸಿದ ಕಾಡಾನೆ

0

ಸುಳ್ಯ: ಗಡಿಪ್ರದೇಶವಾದ ದೇವರಗುಂಡ‌ ಸಮೀಪ ಬೆಳ್ಳಿಪ್ಪಾಡಿಯಲ್ಲಿ ಹಗಲಿನ ವೇಳೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ಭೀತಿ ಹುಟ್ಟಿಸಿತು. ಬೆಳ್ಳಿಪ್ಪಾಡಿ ಮೈಕ್ರೋ ಟವರ್ ಸಮೀಪದಲ್ಲಿ ಶನಿವಾರ ಸಂಜೆ 6ರ ವೇಳೆಗೆ ಜನ ವಸತಿ ಪ್ರದೇಶಕ್ಕೆ ಇಳಿದ ಎರಡು ಆನೆಗಳು ಮನೆಗಳ 10 ಅಡಿ ದೂರದಲ್ಲಿ ಕಾಣಿಸಿಕೊಂಡಿದೆ. ಮನೆಗಳ ಸಮೀಪದ ಗೇಟ್ ಬಳಿಯಾಗಿ ತೋಟಕ್ಕೆ ಇಳಿದವು. ಅಲ್ಲಿಂದ ಆನೆಗಳು ಕನಕಮಜಲು ಭಾಗಕ್ಕೆ ತೆರಳಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಕೇರಳ, ಕರ್ನಾಟದ ಗಡಿ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಇದೀಗ ಆನೆಗಳು ಹಗಲಿನ ವೇಳೆಯಲ್ಲಿಯೇ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿವೆ.

Exit mobile version