Home ತಾಜಾ ಸುದ್ದಿ ಹಂದಿ ಅಣ್ಣಿ ಕೊಲೆ ಪ್ರಕರಣ: ಮೂವರು ರೌಡಿಶೀಟರ್‌ಗಳು ಪೊಲೀಸರ ವಶಕ್ಕೆ

ಹಂದಿ ಅಣ್ಣಿ ಕೊಲೆ ಪ್ರಕರಣ: ಮೂವರು ರೌಡಿಶೀಟರ್‌ಗಳು ಪೊಲೀಸರ ವಶಕ್ಕೆ

0

ಶಿವಮೊಗ್ಗ: ಇಲ್ಲಿನ ಕೋರ್ಟ್‌ಗೆ ಸೋಮವಾರ ಹಂದಿ ಅಣ್ಣಿ ಕೊಲೆ ಆರೋಪಿಗಳು ಹಾಜರಾದ ಸಂದರ್ಭದಲ್ಲಿ ಅಲ್ಲೆ ಇದ್ದ ಮೂವರು ರೌಡಿಶೀಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಹಂದಿ ಅಣ್ಣಿ ಕೊಲೆ ಆರೋಪಿಗಳಿಗೆ ಬೆದರಿಕೆ ಇದ್ದ ಬೆನ್ನಲ್ಲೆ ಈ ಮೂವರು ಆರೋಪಿಗಳ ಬಂಧನ ಸಂಚಲನ ಮೂಡಿಸಿದೆ. ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ದುಷ್ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಶಂಕೆ ಬೆನ್ನಲ್ಲೆ ಈ ಮೂವರ ಬಂಧನ ಚರ್ಚೆಗೆ ಗ್ರಾಸವಾಗಿದೆ.
ಡಿವೈಎಸ್ಪಿ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಮೂವರು ರೌಡಿಶೀಟರ್‌ಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಹಂದಿ ಅಣ್ಣಿ ಹತ್ಯೆ ಆರೋಪಿಗಳಾದ ಚಂದನ್, ಫಾರೂಕ್, ಮಧೂಸೂದನ್, ಎಂ. ಮಧು ಹಾಗೂ ನಂದನ್‌ರಾಜ್ ಐವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಈ ಪೈಕಿ ಮಧು ಹಾಜರಾಗಿರಲಿಲ್ಲ. ಜಯನಗರ ಠಾಣೆಯಲ್ಲಿ ಈ ರೌಡಿಶೀಟರ್‌ಗಳ ವಿಚಾರಣೆ ನಡೆದಿದೆ.

Exit mobile version